
ಕರ್ನಾಟಕಪ್ರಮುಖ ಸುದ್ದಿಮೈಸೂರು
ಜೆಡಿಎಸ್ ನಲ್ಲಿ ಇರದಿದ್ದರೆ ಯಾರು ಗುರುತಿಸುತ್ತಿದ್ದರು: ಹೆಚ್.ಡಿ.ಕೆ ಪ್ರಶ್ನೆ
ಸಿದ್ದರಾಮಯ್ಯ ಜೆಡಿಎಸ್ ನಲ್ಲಿ ಇರದಿದ್ದರೆ ಅವರನ್ನು ಯಾರು ಗುರುತಿಸುತ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಖಾರವಾಗಿಯೇ ಪ್ರಶ್ನಿಸಿದ್ದಾರೆ.
ಶುಕ್ರವಾರ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ಕುಮಾರಸ್ವಾಮಿ, ಮಾಧ್ಯಮಗಳ ಜೊತೆ ಮಾತನಾಡಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಅವರು, ಜೆಡಿಎಸ್ ಅಧಿಕಾರಕ್ಕೆ ಬರೋಲ್ಲ ಅಂತ ಹೇಳಿರುವ ಮುಖ್ಯಮಂತ್ರಿಗಳು ತಾನು ಮೊದಲು ಬೆಳೆದ ಪಕ್ಷವನ್ನು ನೆನಪಿಟ್ಟುಕೊಳ್ಳಲಿ. ರಾಜಕೀಯದಲ್ಲಿ ಅವರನ್ನು ಬೆಳೆಸಿದ ಪಕ್ಷಕ್ಕೆ ಬೆಂಕಿ ಇಡುವ ಕೆಲಸ ಮಾಡುವುದು ಬೇಡ ಎಂದರು.
ಜೆಡಿಎಸ್ ನಲ್ಲಿ ಉಪಮುಖ್ಯಮಂತ್ರಿಯಾಗಿದ್ದಕ್ಕೆ ಅವರನ್ನು ಕಾಂಗ್ರೆಸ್ ಕರೆದುಕೊಂಡಿದೆ. ಇಲ್ಲದಿದ್ದರೆ ಅವರನ್ನು ಕಾಂಗ್ರೆಸ್ ಪಕ್ಷ ಮೂಸಿಯು ನೋಡುತ್ತಿರಲಿಲ್ಲ. ಮುಂದಿನ ಬಾರಿಯೂ ತಾನೇ ಅಧಿಕಾರಕ್ಕೆ ಬರೋದು ಅಂತ ಹೇಳಿಕೊಳ್ಳುತ್ತಿದ್ದಾರೆ. ಅಧಿಕಾರಕ್ಕೆ ಬರೋಕೆ ಇವರು ಯಾವ ಘನಂದಾರಿ ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಯಾರು ಅಧಿಕಾರಕ್ಕೆ ಬರ್ತಾರೆ ಅಂತ ಜನರೇ ತೀರ್ಮಾನಿಸುತ್ತಾರೆ ಎಂದರು.