ಸುದ್ದಿ ಸಂಕ್ಷಿಪ್ತ

‘ಎತ್ತ ಸಾಗುತ್ತಿದೆ ಭಾರತ?’ ವಿಚಾರ ಸಂಕಿರಣ ಮಾ.10,11.

ಮೈಸೂರು,ಮಾ.8 : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ‘ಎತ್ತ ಸಾಗುತ್ತಿದೆ ಭಾರತ?’ ವಿಷಯವಾಗಿ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಪುರಭವನದಲ್ಲಿ ಮಾ.10,11ರಂದು ಆಯೋಜಿಸಿದೆ.

ಬೆಳಗ್ಗೆ 11ಕ್ಕೆ ಪ್ರತಿಜ್ಞಾ ಸ್ವೀಕಾರದ ಮೂಲಕ ಉದ್ಘಾಟನೆ, ಪ್ರೊ.ಕಾಂಚ ಐಲಯ್ಯ ಅವರಿಂದ ದಿಕ್ಸೂಚಿ ಭಾಷಣ, ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅಧ್ಯಕ್ಷತೆ, ದೇವನೂರು ಮಹಾದೇವ, ಡಾ.ಕೆ.ವೀರಮಣಿ, ತೀಸ್ತಾ ಸೆಟಲ್ವಾಡ್, ಅಬ್ದುಲ್ ಸಲೀಂ ಪುತ್ತಿಗೆ, ಕೆ.ಟಿ.ಗಂಗಾಧರ್, ಡಾಸಾಜನ್ ಕೆ.ಜಾರ್ಜ್, ಸಿ.ಎಂ.ಮುನಿಯಪ್ಪ, ಡಾ.ಡಿ.ಜಿ.ಸಾಗರ್, ಗುರುಪ್ರಸಾದ್ ಕೆರಗೋಡು ಇನ್ನಿತರರು ಉಪನ್ಯಾಸ ನೀಡುವರು. ಮಾ.11ರಂದು ಸಮಾರೋಪ ಸಮಾರಂಭ. (ಕೆ.ಎಂ.ಆರ್)

Leave a Reply

comments

Related Articles

error: