ಕರ್ನಾಟಕ

ಅಡುಗೆ ಅನಿಲ ಸೋರಿಕೆ: ಬೆಂಕಿ ತಗುಲಿ ಮನೆ ಭಸ್ಮ

ತುಮಕೂರು,ಮಾ.09: ಅಡುಗೆ ಅನಿಲ ಸೋರಿಕೆಯಿಂದ ಮನೆಗೆ ಬೆಂಕಿ ತಗುಲಿ ಭಸ್ಮವಾದ ಘಟನೆ ತುಮಕೂರು ಜಿಲ್ಲೆಯ ಚಿಕ್ಕಹಳ್ಳಿಯಲ್ಲಿ ಘಟನೆ ನಡೆದಿದೆ.

ಮನೆ ಮಾಲೀಕ ಹಿರೇಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ನಾಗರಾಜು ಕುಟುಂಬಸ್ಥರೊಂದಿಗೆ ದೇವರ ಹೊಸಹಳ್ಳಿಯ ವೀರಭದ್ರಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ಹೋಗಿದ್ದ ವೇಳೆ ಘಟನೆ ನಡೆದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಮೂರು ಅಗ್ನಿಶಾಮಕ ದಳ ವಾಹನಗಳು ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. (ವರದಿ: ಪಿ.ಎಸ್ )

Leave a Reply

comments

Related Articles

error: