ಕರ್ನಾಟಕಪ್ರಮುಖ ಸುದ್ದಿ

ಕೆಪಿಎಸ್‍ಸಿ: ವಿವಿಧ ಹುದ್ದೆಗಳ ಮೂಲ ದಾಖಲೆ ಪರಿಶೀಲನೆ ಹಾಗೂ ಸಂದರ್ಶನ

ಬೆಂಗಳೂರು (ಮಾ.8): ಕರ್ನಾಟಕ ಲೋಕ ಸೇವಾ ಆಯೋಗವು ಗ್ರೂಪ್ –ಎ ಮತ್ತು ಬಿ ತಾಂತ್ರಿಕ/ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ಆಯೋಗದ ಕೇಂದ್ರ ಕಚೇರಿ, ಬೆಂಗಳೂರು, ಇಲ್ಲಿ ಆಯಾ ಹುದ್ದೆಗಳ ಮುಂದೆ ನಮೂದಿಸಿರುವ ದಿನಾಂಕದಂದು ಮೂಲ ದಾಖಲೆಗಳ ಪರಿಶೀಲನೆ ಹಾಗೂ ಸಂದರ್ಶನವನ್ನು ನಡೆಸಲಿದೆ.

ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ವಿಜ್ಞಾನ ವಿಭಾಗದ ಉಪನ್ಯಾಸಕರು – 03 ಹೈ.ಕ. ಹುದ್ದೆಗಳು, ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಇಂಗ್ಲೀಷ್ ವಿಭಾಗದ ಉಪನ್ಯಾಸಕರು – 01 ಹೈ.ಕ. ಹುದ್ದೆಗಳು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಮೆಕ್ಯಾನಿಕಲ್ ವಿಭಾಗದ ಉಪನ್ಯಾಸಕರು – 01 ಹೈ.ಕ. ಹುದ್ದೆಗಳು. ಔಷಧ ನಿಯಂತ್ರಣ ಇಲಾಖೆಯಲ್ಲಿ ಉಪನ್ಯಾಸಕರು (ಫಾರ್ಮಕಾಗ್ನೀಸಿ) – 01 (ಬ್ಯಾ.ಲಾ) ಹುದ್ದೆ., ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ರಸಾಯನ ಶಾಸ್ತ್ರಜ್ಞ 01 ಹೈ.ಕ. ಹುದ್ದೆ, ಆಯುಷ್ ಇಲಾಖೆಯಲ್ಲಿನ ಆಯುಷ್ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರು/ಸಹ ಪ್ರಾಧ್ಯಾಪಕರು (ಪ್ರಕೃತಿ ಚಿಕಿತ್ಸೆ) – 01+04 ಹುದ್ದೆಗಳು., ಆಯುಷ್ ಇಲಾಖೆಯಲ್ಲಿನ ಆಯುಷ್ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರು/ಸಹ ಪ್ರಾಧ್ಯಾಪಕರು (ಯೋಗ) – 01+03 ಹುದ್ದೆಗಳು) ಈ ಹುದ್ದೆಗಳಿಗೆ ಮಾರ್ಚ್ 21 ರಂದು ಬೆಳಿಗ್ಗೆ 8.30 ಗಂಟೆಯಿಂದ ಮಧ್ಯಾಹ್ನ 12.30 ಗಂಟೆವರೆಗೆ.

ಅಲ್ಲಸಂಖ್ಯಾತರ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿ ಬೋಧಕ ಹುದ್ದೆಗಳಾದ ಕನ್ನಡ ಭಾಷಾ ಉಪಾನ್ಯಾಸಕರು – 05+01 (ಹೈ.ಕ) ಹುದ್ದೆಗಳು, ಅರ್ಥಶಾಸ್ತ್ರ ಉಪನ್ಯಾಸಕರು – 05+01 ಹೈಕ (ಹುದ್ದೆಗಳು) ಜೀವಶಾಸ್ತ್ರ ಉಪನ್ಯಾಸಕರು – 05+01 ಹೈಕ ಹುದ್ದೆಗಳು, ಗಣಿತಶಾಸ್ತ್ರ ಉಪನ್ಯಾಸಕರು – 06 = 01 ಹೈಕ ಹುದ್ದೆಗಳಿಗೆ ಮಾರ್ಚ್ 26 ರಂದು ಬೆಳಿಗ್ಗೆ 8.30 ಗಂಟೆಯಿಂದ ಮಧ್ಯಾಹ್ನ 12.30 ಗಂಟೆವರೆಗೆ.

ಲೆಕ್ಕಶಾಸ್ತ್ರ (ಅಕೌಂಟೆನ್ಸಿ) ಉಪನ್ಯಾಸಕರು – 05+01 ಹೈಕ ಹುದ್ದೆಗಳು, ಇತಿಹಾಸ ಉಪನ್ಯಾಸಕರು – 05 + 01 (ಹೈಕ) ಹುದ್ದೆಗಳು ಹಾಗೂ ವಾಣಿಜ್ಯ (ಬಿಸ್‍ನೆಸ್ ಸ್ಟಡೀಸ್) ಉಪನ್ಯಾಸಕರ ಹುದ್ದೆ, ಭೌತಶಾಸ್ತ್ರ ಉಪನ್ಯಾಸಕರು – 05+01 (ಹೈಕ) ಹುದ್ದೆಗಳಿಗೆ ಮಾರ್ಚ್ 27 ರಂದು ಬೆಳಿಗ್ಗೆ 8.30 ಗಂಟೆಯಿಂದ ಮಧ್ಯಾಹ್ನ 12.30 ಗಂಟೆವರೆಗೆ.

ರಸಾಯನ ಶಾಸ್ತ ಉಪನ್ಯಾಸಕರು – 04+01 (ಹೈಕ)ಹುದ್ದೆಗಳು ಮತ್ತು ಇಂಗ್ಲೀಷ್ ಭಾಷಾ ಉಪನ್ಯಾಸಕರ – 05 + 01 (ಹೈಕ) ಹುದ್ದೆಗಳಿಗೆ ಮಾರ್ಚ್ 28 ರಂದು ಬೆಳಿಗ್ಗೆ 8.30 ಗಂಟೆಯಿಂದ ಮಧ್ಯಾಹ್ನ 12.30 ಗಂಟೆವರೆಗೆ.

ಮಹಿಳಾ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು 52 ಹುದ್ದೆಗಳಿಗೆ 02-04-2018 ರಿಂದ 06-04-2018 ರವರೆಗೆ ಬೆಳಿಗ್ಗೆ 8.30 ಗಂಟೆಯಿಂದ ಮಧ್ಯಾಹ್ನ 12.30 ಗಂಟೆವರೆಗೆ.

ಮಹಿಳಾ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆಯಲ್ಲಿ ಅಧೀಕ್ಷಕರು ದರ್ಜೆ-1 78 ಹುದ್ದೆಗಳಿಗೆ ಏಪ್ರಿಲ್ 9 ರಂದು ಬೆಳಿಗ್ಗೆ 8.30 ಗಂಟೆಗೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಭೂವಿಜ್ಞಾನಿ – 97+40 (ಹೈಕ) ಹುದ್ದೆಗಳು ಏಪ್ರಿಲ್ 9 ರಿಂದ ಏಪ್ರಿಲ್ 13 ರವರೆಗೆ ಬೆಳಿಗ್ಗೆ 8.30 ಗಂಟೆಯಿಂದ ಮಧ್ಯಾಹ್ನ 12.30 ಗಂಟೆವರೆಗೆ.

ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಸಊಚನಾ ಪತ್ರಗಳನ್ನು ಕಳುಹಿಸಲಾಗುತ್ತಿದೆ. ಅರ್ಹ ಅಭ್ಯರ್ಥಿಗಳ ಪಟ್ಟಿಗಳನ್ನು ಮಾಹಿತಿಗಾಗಿ ಆಯೋಗದ ವೆಬ್‍ಸೈಟ್ “http://kpsc.kar.nic.in/Eligibility List” ಗಳಲ್ಲಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗ ತಿಳಿಸಿದೆ. (ಎನ್.ಬಿ)

Leave a Reply

comments

Related Articles

error: