ಮೈಸೂರು

ನವಮಂಗಳೂರು ಬಂದರು ಮೂಲಕ ಕೊಲ್ಲಿ ರಾಷ್ಟ್ರಗಳಿಗೂ ಸರಕು ಸಾಗಣೆಯಾಗಲಿದೆ: ಪಿ.ಸಿ. ಪರೀದ್

ಮುಂದಿನ ಎರಡು ತಿಂಗಳಲ್ಲಿ ದುಬೈ ಮೊದಲಾದ ಕೊಲ್ಲಿ ರಾಷ್ಟ್ರಗಳಿಗೂ ಮಂಗಳೂರು ಬಂದರು ಮೂಲಕ ಸರಕು ಸಾಗಣೆ ಆರಂಭವಾಗಲಿದೆ ಎಂದು ನವಮಂಗಳೂರು ಬಂದರು ಮಂಡಳಿ ಅಧ್ಯಕ್ಷ ಪಿ.ಸಿ. ಪರೀದ್ ಹೇಳಿದರು.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ನವಮಂಗಳೂರು ಬಂದರು ಮಂಡಳಿ ಏರ್ಪಡಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಪಿ.ಸಿ. ಪರೀದ್ ಮಾತನಾಡಿದರು.

ಸರಕು ಸಾಗಣೆ ಮುಂದಿನ ತಿಂಗಳಿನಿಂದ ಆರಂಭವಾಗಲಿದ್ದು, ಅದಕ್ಕಾಗಿ ಟೆಂಡರ್ ಕರೆಯಲಾಗಿದೆ. ಜನವರಿ ಅಥವಾ ಫೆಬ್ರವರಿ ವೇಳೆಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು. ಮೈಸೂರಿನ ಸುಮಾರು 25 ಕಂಪನಿ ನವಮಂಗಳೂರು ಮೂಲಕವೇ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ. ಈ ಬಂದರು ರಫ್ತು ಮತ್ತು ಆಮದು ಮಾಡಿಕೊಳ್ಳುವವರಿಗೆ ಹೆಚ್ಚು ಅನುಕೂಲಕರವಾಗಲಿದೆ. ಅಲ್ಲದೇ ಸ್ವಚ್ಛತೆಗೂ ಹೆಸರಾಗಿದ್ದು ಹಲವು ಪ್ರಶಸ್ತಿಗಳನ್ನು ಗಳಿಸಿದೆ. ನೆಸ್ಲೆ ಕಂಪನಿ ಮಾಡುತ್ತಿರುವ  ಕಾಫಿ ರಫ್ತಿನ ಪ್ರಮಾಣದಲ್ಲಿ ಏರಿಕೆಯಾಗಿರುವುದೇ ಇದಕ್ಕೆ ಸಾಕ್ಷಿ ಎಂದು ತಿಳಿಸಿದರು. ರಾಜ್ಯದ ಸುರಕ್ಷಿತ, ಕಡಿಮೆ ಸುಂಕ ಪಾವತಿಸಬೇಕಾದ ಹಸಿರು ಬಂದರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಬಂದರಿನಿಂದಲೇ ವ್ಯವಹಾರ ಆರಂಭಿಸಿ ಎಂದು ತಿಳಿಸಿದರು.

ಈ ಸಂದರ್ಭ ನಂಜನಗೂಡು ಕೈಗಾರಿಕಾ ಸಂಘದ ಅಧ್ಯಕ್ಷ ಎಂ.ಎಸ್. ರಾಮಪ್ರಸಾದ್, ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಎ.ಎಸ್. ಸತೀಶ್, ಉಪಾಧ್ಯಕ್ಷ ಜಯಂತ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: