ಮೈಸೂರು

ಪ್ರೇಕ್ಷಕರ ಮನಸೂರೆಗೊಂಡ ಅಂಧ ಮಕ್ಕಳ ನೃತ್ಯ ಪ್ರದರ್ಶನ

ಭಾರತದ ಸಾಂಸ್ಕೃತಿಕ ಪರಂಪರೆಯಲ್ಲಿ ಹೆಸರಾದ ನೃತ್ಯಕಲೆ ಭರತನಾಟ್ಯ ಈ ಕಲೆಯನ್ನು ಅಂಧ ಮಕ್ಕಳು ಕರಗತ ಮಾಡಿಕೊಂಡು ನೃತ್ಯ ಪ್ರದರ್ಶನ ನೀಡಿದ್ದು, ನೋಡುಗರ ಅಚ್ಚರಿಗೆ ಕಾರಣವಾಯಿತು.

ನಾದ ವಿದ್ಯಾಲಯ ಸಂಗೀತ ಮತ್ತು ನೃತ್ಯ ಅಕಾಡೆಮಿಯ ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಿದ್ದ ನಾದ ನೃತ್ಯೋತ್ಸವ-2016 ಕಾರ್ಯಕ್ರಮದಲ್ಲಿ ರಂಗರಾವ್ ಸ್ಮಾರಕ ಅಂಧ ಹೆಣ್ಣು ಮಕ್ಕಳ ವಸತಿ ಶಾಲೆಯ 14 ಮಕ್ಕಳು ಭರತನಾಟ್ಯ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಇಸ್ಕಾನ್ ಉಪಾಧ್ಯಕ್ಷರಾದ ರಸಿಕ ಶೇಖರ ದಾಸ, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥೇಶ‍್ವರ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪಲ್ಲವಿ, ರಾಧ, ರೋಜ, ಭವ್ಯಶ್ರೀ, ನಿಂಗಮ್ಮಣಿ, ಭಾನುಮತಿ, ಮಂಜುಳ, ಪದ್ಮಶ್ರೀ, ಅಭಿನಯ, ಕವನ, ಕೀರ್ತಿ, ಅಶ್ವಿನಿ ಎಂಬ ವಿದ್ಯಾರ್ಥಿನಿಯರು ಭರತ ನಾಟ್ಯ ನೃತ್ಯದ ಪುಷ್ಪಾಂಜಲಿ, ಆನಂದ ಯೋಗ, ಎಂ.ಎಸ್. ಸುಬ್ಬಲಕ್ಷ್ಮಿಯ ಸಂಗೀತ, ಹಿಮಾಚಲ ಪ್ರದೇಶದ ಜಾನಪದ ನೃತ್ಯ ಹೀಗೆ ಸುಮಾರು 35 ನಿಮಿಷಗಳ ಕಾಲ ನೃತ್ಯ ಮಾಡಿ ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡಿದರು.

ಸಂಜೆ ನಡೆದ ಕಾರ್ಯಕ್ರಮದಲ್ಲಿ ವಿದ್ವಾನ್ ಎಂ.ಎಸ್. ನವೀನ್, ವಿದುಷಿ ಮಿಶ್ರಾ ನವೀನ್ ಅವರು ರಚಿಸಿರುವ ಭರತನಾಟ್ಯದ ಸಂಗೀತ ರಚನೆಯಾದ ‘ನಮಿಸು’ ಧ್ವನಿಸುರುಳಿಯನ್ನು ಪ್ರೊ. ರಾಮಮೂರ್ತಿ ರಾವ್ ಬಿಡುಗಡೆ ಮಾಡಿದರು.

ಕೈಗಾರಿಕೋದ್ಯಮಿ ಕೆ.ವಿ. ಮೂರ್ತಿ, ಶ್ರೀನಿವಾಸ ರಾವ್, ನವೀನ್, ಮಿತ್ರಾ ನವೀನ್ ಉಪಸ್ಥಿತರಿದ್ದರು.

Leave a Reply

comments

Related Articles

error: