ಪ್ರಮುಖ ಸುದ್ದಿಮೈಸೂರು

ನಾಡ ಧ್ವಜದ ರೂಪು ರೇಷೆಗಳನ್ನು ಅಂತಿಮಗೊಳಿಸಿದ್ದು ಕೇಂದ್ರದ ಒಪ್ಪಿಗೆಗೆ ಕಳುಹಿಸಲಾಗಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದಲ್ಲಿ ನಾಲ್ಕು ತಿಂಗಳಿಗೆ ಆಗುವಷ್ಟು ವಿದ್ಯುತ್, ನೀರು ಸಂಗ್ರಹಿಸಲಾಗಿದೆ : ಡಿಕೆಶಿ

ಮೈಸೂರು,ಮಾ.9:-  ನಾಡ ಧ್ವಜದ ರೂಪು ರೇಷೆಗಳನ್ನು ಅಂತಿಮಗೊಳಿಸಿದ್ದು ಕೇಂದ್ರದ ಒಪ್ಪಿಗೆಗೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಪ್ರಯುಕ್ತ ಪಿರಿಯಾಪಟ್ಟಣಕ್ಕೆ ಆಗಮಿಸಿದ ಅವರು ಮಾಧ್ಯಮಗಳೊಂದಿಗೆ ಕನ್ನಡ ಧ್ವಜದ ಬಗ್ಗೆ ನಡೆಯುತ್ತಿರುವ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ ನಾಡ ಧ್ವಜದ ರೂಪು ರೇಷೆಗಳನ್ನು ಅಂತಿಮಗೊಳಿಸಿದ್ದು ಕೇಂದ್ರದ ಒಪ್ಪಿಗೆಗೆ ಕಳುಹಿಸಲಾಗಿದೆ. ಇದು ರಾಷ್ಟ್ರಧ್ವಜದಂತೆ ನಾಡಧ್ವಜ ಅಷ್ಟೇ. ಕನ್ನಡ ಧ್ವಜವೇ ಬೇರೆ ನಾಡ ಧ್ವಜವೇ ಬೇರೆ. ಇದನ್ನು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ, ಕನ್ನಡ ರಾಜ್ಯೋತ್ಸದಂದು ಬಳಸಬಹುದು. ರಾಷ್ಟ ಧ್ವಜದಂತೆ ಈ ಧ್ವಜಕ್ಕೂ ಸಹ ತನ್ನದೇ ಆದ ಗೌರವಗಳಿರುತ್ತವೆ. ಕೆಲ ನಿಯಮಗಳನ್ನು ರೂಪಿಸಲಾಗುತ್ತದೆ ಎಲ್ಲರೂ ಅದಕ್ಕೆ ಗೌರವ ನೀಡಬೇಕಾಗುತ್ತದೆ ಎಂದರು. ಹಾಸನ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಿಎಟಿಯಿಂದ ಸ್ಟೇ ವಿಚಾರಕ್ಕೆ ಪ್ರತಿಕ್ರಿಯಿಸಿ ವರ್ಗಾವಣೆ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವಂತಿಲ್ಲ ನಾನು ಮಾತಾಡೋಲ್ಲ ನೋ ಕಾಮೆಂಟ್ ಎಂದು ಜಾರಿಕೊಂಡರು. ವರುಣ ಕ್ಷೇತ್ರದಲ್ಲಿ ಹೆಚ್ ಡಿ ಕೆ ವಿಕಾಸಪರ್ವ ಕಾರ್ಯಕ್ರಮ ಮಾಡಲಿ ತೊಂದರೆಯಿಲ್ಲ. ಸಾರ್ವಜನಿಕ ಕಾರ್ಯಕ್ರಮ ರ್ಯಾಲಿಗಳು ಎಲ್ಲರೂ ಮಾಡಬಹುದು ಆದರೆ ಗೆಲ್ಲೊಕ್ಕಾಗುತ್ತಾ? ಕಳೆದ ಬಾರಿ ಕೂಡ ಕಾರ್ಯಕ್ರಮ, ಚುನಾವಣಾ ಪ್ರಚಾರ ಮಾಡಿದ್ದರು. ಎಷ್ಟು ಮತಳಿಸಿದರು ಎಂದು ಪ್ರಶ್ನಿಸಿದರು. ಲೋಕಾಯುಕ್ತ ಸಂಸ್ಥೆ ನಾಶ ಮಾಡಿದ್ದು ಸಿದ್ದರಾಮಯ್ಯ ಎಂಬ ಹೆಚ್.ವಿಶ್ವನಾಥ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.  ಇದೇ ವೇಳೆ ಇಂಧನ ಸಚಿವ ಡಿಕೆಶಿ ಮಾತನಾಡಿ  ಈ ಭಾರಿ ರಾಜ್ಯದಲ್ಲಿ ನಾಲ್ಕು ತಿಂಗಳಿಗೆ ಆಗುವಷ್ಟು ವಿದ್ಯುತ್, ನೀರು ಸಂಗ್ರಹಿಸಲಾಗಿದೆ. ಶಿಕ್ಷಣಕ್ಕೆ, ಗ್ರಾಹಕರಿಗೆ,ಕೈಗಾರಿಕೆಗಳಿಗೆ ಬೇಕಾಗುವಷ್ಟು ವಿದ್ಯುತ್ ಸಂಗ್ರಹಿಸಲಾಗಿದೆ. ಪಾವಗಡದ ಸೋಲಾರ್ ಪಾರ್ಕ್ ನಿಂದ ಈಗಾಗಲೇ 600 ಮೆಗಾವ್ಯಾಟ್ ವಿದ್ಯುತ್ ಸಂಗ್ರಹಿಸಲಾಗಿದೆಎಂದು ಹೇಳಿದರು.

ಈ ಸಂದರ್ಭ ಕಾಂಗ್ರೆಸ್ ಮುಖಂಡರು ಇದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: