ಮೈಸೂರು

ಶ್ರೀಸಾಮಾನ್ಯ ಅಭಿನಂದನಾ ಗ್ರಂಥ ಅರ್ಪಣೆ

ಮೈಸೂರು ವಿಶ್ವವಿದ್ಯಾನಿಲಯ ಸಂಜೆ ಕಾಲೇಜಿನಲ್ಲಿ ನಾಲ್ಕು ದಶಕಗಳಿಂದ ದುಡಿಯುತ್ತಿರುವ ಡಿ ಗ್ರೂಪ್ ನೌಕರ ಮಹದೇವು ಅವರಿಗೆ ಕಾಲೇಜಿನ ಬಿ.ಎ.ಸಭಾಂಗಣದಲ್ಲಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭ ಸುಮಾರು 15 ಲೇಖನಗಳ ಗುಚ್ಛವುಳ್ಳ ‘ಶ್ರೀಸಾಮಾನ್ಯ’  ಅಭಿನಂದನಾ ಗ್ರಂಥವನ್ನು ಅರ್ಪಿಸಲಾಯಿತು.

ಕನ್ನಡಪ್ರಭ ದಿನಪತ್ರಿಕೆಯ ಸಂಪಾದಕ ಅಂಶಿ ಪ್ರಸನ್ನಕುಮಾರ್ ಕೃತಿ ಬಿಡುಗಡೆ ಮಾಡಿದರು. ನಿವೃತ್ತ ಪ್ರಾಂಶುಪಾಲ ಪ್ರೊ.ಡಿ.ನಂಜುಂಡಯ್ಯ ಮಾತನಾಡಿ, 1964 ರಿಂದಲೂ ಮೈಸೂರು ವಿವಿಯೊಂದಿಗೆ ನಂಟು ಹೊಂದಿದ್ದೇನೆ. 1997 ರಲ್ಲಿ ಮಹದೇವು ಅವರು ಪರಿಚಯವಾದರು. ವೃತ್ತಿಯಲ್ಲಿ ಪರಿಚಾರಕನಾಗಿ, ಪ್ರವೃತ್ತಿಯಲ್ಲಿ ನಲ್ಲಿ ರಿಪೇರಿ ಕೆಲಸ ಮಾಡಿಕೊಂಡಿರುವ ಮಹದೇವು ಅವರು ಪ್ರಾಮಾಣಿಕರು. ಅವರಂತೆಯೇ ಇತರರು ಪ್ರಾಮಾಣಿಕತೆ ಬೆಳೆಸಿಕೊಂಡರೆ ದುಡಿಯುತ್ತಿರುವ ಸಂಸ್ಥೆಗೆ ಸಹಾಯವಾಗುತ್ತದೆ ಎಂದರು.

ಶ್ರೀ ಸಾಮಾನ್ಯ ಕೃತಿಯ ಸಂಪಾದಕ ಡಾ.ಸಿ.ಡಿ.ಪರಶುರಾಮ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೈಸೂರು ವಿವಿ ಸಂಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಚಂದ್ರಮ್ಮ, ಮಾಜಿ ಮೇಯರ್ ಟಿ.ಬಿ,ಚಿಕ್ಕಣ್ಣ, ಅಭನಂದನಾ ಸಮಿತಿ ಅಧ‍್ಯಕ್ಷ ಡಾ.ಟಿ.ಕೃಷ್ಣೇಗೌಡ ಭಾಗವಹಿಸಿದ್ದರು.

Leave a Reply

comments

Related Articles

error: