ಕರ್ನಾಟಕ

ನಾಟಕ ಕಲೆಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ : ಕೆ.ಬಿ.ಚಂದ್ರಶೇಖರ್

ರಾಜ್ಯ(ಮಂಡ್ಯ)ಮಾ.9:- ಪೌರಾಣಿಕ ನಾಟಕಗಳು ಜನರಿಗೆ ಒಳ್ಳೆಯ, ಗುಣ, ನಡತೆ ಕಲಿಸಿ, ಕೆಟ್ಟ ಗುಣಗಳನ್ನು ದೂರ ಮಾಡಿ ಸದ್ಬುದ್ದಿ ತಿಳಿಸಿಕೊಡುತ್ತವೆ. ಆದರೆ ಟಿವಿ, ಸಿನಿಮಾಗಳು ಕೇವಲ ಮನರಂಜನೆ ನೀಡುತ್ತವೆ. ಹಾಗಾಗಿ ನಾಟಕ ಕಲೆಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದರು.

ಅವರು ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಆದಿಹಳ್ಳಿ ಗ್ರಾಮದಲ್ಲಿ ಶ್ರೀ ಬೀರೇಶ್ವರ ನಾಟಕ ಮಂಡಳಿಯವರು ಹಮ್ಮಿಕೊಂಡಿದ್ದ ಶನಿಪ್ರಭಾವ, ರಾಜ ಸತ್ಯವ್ರತ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಜನರು ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ಮಾಡಬೇಕು. ಉಳಿದ ಸಮಯಗಳಲ್ಲಿ ಒಗ್ಗಟ್ಟಿನಿಂದ ಇರಬೇಕು. ದ್ವೇಷ ಅಸೂಯೆಗಳನ್ನು ದೂರ ಮಾಡಬೇಕು. ಚುನಾವಣೆಯ ನಂತರ ಯಾರು ಜನಪ್ರತಿನಿಧಿಯಾಗುತ್ತಾರೋ ಅವರಿಂದ ಗ್ರಾಮಕ್ಕೆ ಆಗಬೇಕಾದ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಇದು ಬುದ್ದಿವಂತ ಗ್ರಾಮಗಳ ಲಕ್ಷಣ ಎಂದು ಹೇಳಿದರು. ಯಾವ ಗ್ರಾಮದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುತ್ತಾರೋ ಆ ಗ್ರಾಮಕ್ಕೆ ಅಭಿವೃದ್ದಿ ಕಾಮಗಾರಿಗಳು ಹೆಚ್ಚು ನಡೆಯುತ್ತವೆ. ಇದನ್ನು ಬಿಟ್ಟು ಗುಂಪುಗಾರಿಕೆ, ಪಕ್ಷ ರಾಜಕಾರಣ ಮಾಡಿದರೆ ಯಾವ ರಾಜಕಾರಣಿಗಳು ತಮ್ಮ ಗ್ರಾಮದ ಬಗ್ಗೆ ಕಾಳಜಿ ವಹಿಸುವುದಿಲ್ಲ ಹಾಗಾಗಿ ಎಲ್ಲಾ ರಾಜಕಾರಣಿಗಳನ್ನು ಗ್ರಾಮಕ್ಕೆ ಕರೆದು ಗೌರವಾದರಗಳನ್ನು ನೀಡಿ ಗ್ರಾಮದ ಅಭಿವೃದ್ಧಿ ಮಾಡಿಸಿಕೊಳ್ಳುವುದು ಬುದ್ದಿವಂತಿಕೆ. ಇದನ್ನು ಬಿಟ್ಟು ಆ ಪಕ್ಷದವ್ರು ಗೆದ್ದಿದ್ದಾರೆ, ಈ ಪಕ್ಷದವರು ಸೋತಿದ್ದಾರೆ ಎಂದು ಕಾಲಹರಣ ಮಾಡಿದರೆ ಗ್ರಾಮವು ಅಭಿವೃದ್ಧಿಯಿಂದ ವಂಚಿತವಾಗುತ್ತದೆ ಇದನ್ನು ಆದಿಹಳ್ಳಿ ಗ್ರಾಮಸ್ಥರು ಅರ್ಥ ಮಾಡಿಕೊಂಡು ತಮ್ಮ ಗ್ರಾಮದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಸಿ.ನಾರಾಯಣಗೌಡ ಮಾತನಾಡಿ ನಮ್ಮ ಸಂಸ್ಕೃತಿ-ಪರಂಪರೆಯ ಪ್ರತೀಕವಾಗಿರುವ ನಾಟಕ ಕಲೆಗಳನ್ನು ಉಳಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಕಲಾವಿದರಿಗೆ ಸರಕಾರವು ಸೂಕ್ತ ಸೌಲಭ್ಯ, ಹಾಗೂ ಮಾಸಾಶನ ನೀಡಲು ಕ್ರಮ ವಹಿಸಬೇಕೆಂದು ಒತ್ತಾಯ ಮಾಡಿದರು.

ಶಾಸಕ ಕೆ.ಸಿ.ನಾರಾಯಣಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಮಾಜಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ಜಿ.ಪಂ.ಸದಸ್ಯ ಕೋಡಿಮಾರನಹಳ್ಳಿ ಎಲ್.ದೇವರಾಜು, ತಾ.ಪಂ.ಉಪಾಧ್ಯಕ್ಷ ಜಾನಕೀರಾಂ, ಸದಸ್ಯರಾದ ಮೋಹನ್, ಮನ್‍ಮುಲ್ ನಿರ್ದೇಶಕ ಡಾಲು ರವಿ, ಜಿ.ಪಂ.ಮಾಜಿ ಸದಸ್ಯ ವಿ.ಮಂಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: