ಮೈಸೂರು

ವಿದ್ಯುತ್ ಶಾಕ್ ಗೆ ಬಾಲಕ ಬಲಿ

ವಿದ್ಯುತ್ ಶಾಕ್ ತಗುಲಿ ಬಾಲಕನೋರ್ವ ಮೃತಪಟ್ಟ ಘಟನೆ ಮೈಸೂರಿನ ಸರ್ದಾರ್ ವಲ್ಲಭಬಾಯಿ ಪಟೇಲ್ ನಗರದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಕೊಳ್ಳೇಗಾಲ ಮೂಲದ ಅಭಿ(14) ಎಂಬ ಬಾಲಕನೇ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ದುರ್ದೈವಿ. ಈತ ಲಲಿತಾದ್ರಿಪುರ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದ ಎಂದು ತಿಳಿದು ಬಂದಿದೆ.  ಈತನ ತಂದೆ ಮಾದಶೆಟ್ಟಿ ಎಂಬವರು ಸರ್ದಾರ್ ವಲ್ಲಭ ಬಾಯಿ ಪಟೇಲ್ ನಗರದ ಮನೆಯೊಂದರಲ್ಲಿ ವಾಚ್ ಮನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲಿ ಕಟ್ಟಡ ಕಾಮಗಾರಿ ಕೆಲಸ ನಡೆಯುತ್ತಿದ್ದು. ಕಟ್ಟಡಕ್ಕೆ ಅವರು ನೀರುಣಿಸುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಶನಿವಾರ ಬೆಳಿಗ್ಗೆ ಬಾಲಕ ಪಂಪ್ ಆನ್ ಮಾಡಲು ತೆರಳಿದ್ದು ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಸಬ್ ಇನ್ಸಪೆಕ್ಟರ್ ಜಯಪ್ರಕಾಶ್ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ. ಕಟ್ಟಡ ಮಾಲಿಕರೂ ಸಹ ಸ್ಥಳಕ್ಕೆ ಭೇಟಿ ನೀಡಿದ್ದು ವಿಷಯವನ್ನು ಸಂಗ್ರಹಿಸುತ್ತಿದ್ದಾರೆ.

Leave a Reply

comments

Related Articles

error: