ಕ್ರೀಡೆಪ್ರಮುಖ ಸುದ್ದಿ

ಭಾರತ-ಕೊರಿಯಾ ಹಾಕಿ ಸರಣಿ: ಭಾರತಕ್ಕೆ ಸರಣಿ ಜಯ

ದಕ್ಷಿಣ ಕೊರಿಯಾ,ಮಾ.9-ಭಾರತ-ದಕ್ಷಿಣ ಕೊರಿಯಾ ನಡುವಿನ ಮಹಿಳಾ ಹಾಕಿ ಪಂದ್ಯಾವಳಿಯ ನಾಲ್ಕನೇ ಪಂದ್ಯದಲ್ಲಿ ಭಾರತ 3-1 ಅಂತರದಿಂದ ಜಯ ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡಿದೆ.

ದಕ್ಷಿಣ ಕೊರಿಯಾದಲ್ಲಿನ ಜಿನ್ಚನ್ ಅಥ್ಲೇಟಿಕ್ ಸೆಂಟರ್ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಗುರ್ಜಿತ್ ಕೌರ್ (2ನೇ ನಿಮಿಷ), ದೀಪಿಕಾ (14ನೇ ನಿಮಿಷ) ಹಾಗೂ ಪೂನಂ ರಾಣಿ (47ನೇ ನಿಮಿಷ) ತಮ್ಮ ಗೋಲುಗಳನ್ನು ಗಳಿಸಿ ತಂಡದ ಗೆಲುವಿಗೆ ಕಾರಣಕರ್ತರಾದರು.

ಇನ್ನು ಕೊರಿಯಾ ಪರವಾಗಿ ಮಿ ಹ್ಯುನ್ ಪಾರ್ಕ್ ಪಂದ್ಯದ ಐವತ್ತೇಳನೇ ನಿಮಿಷದಲ್ಲಿ ಗೋಲು ಗಳಿಸಿದ್ದು ತಂಡದ ಸೋಲಿನ ಅಂತರ ತಗ್ಗಿಸಲು ನೆರವಾದರು.

ಒಟ್ಟು ಐದು ಪಂದ್ಯಗಳ ಸರಣಿಯಲ್ಲಿ ಇದು ನಾಲ್ಕನೇ ಪಂದ್ಯವಾಗಿದ್ದು ಭಾರತ 3-1 ಅಂತರದಿಂಡ ಸರಣಿ ಕೈವಶ ಮಾಡಿಕೊಂಡಿದೆ. ಸರಣಿಯ ಕೊನೆಯ ಪಂದ್ಯವು ಮಾ.11 ರಂದು ನಡೆಯಲಿದೆ. (ಎಂ.ಎನ್)

 

Leave a Reply

comments

Related Articles

error: