ಸುದ್ದಿ ಸಂಕ್ಷಿಪ್ತ

ದೀಪಶ್ರೀ.ಎಸ್. ಅವರಿಗೆ ಪಿಎಚ್.ಡಿ. ಪದವಿ ಪ್ರಕಟ

ಮೈಸೂರು,ಮಾ10:-  ಸಿಂಡಿಕೇಟಿನಿಂದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ದತ್ತವಾದ ಅಧಿಕಾರಕ್ಕನುಗುಣವಾಗಿ ಮತ್ತು ಪರೀಕ್ಷಾ ಮಂಡಳಿಯ ಶಿಫಾರಸ್ಸಿನ ಮೇರೆಗೆ ದೀಪಶ್ರೀ.ಎಸ್. ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ.

ಡಾ.ಎಸ್.ಆರ್.ರಮೇಶ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ “Relationship between Longevity, Antioxidant Enzymes and Oxidative Stress in Drosophila Melanogaster”   ಕುರಿತು ಸಾದರಪಡಿಸಿದ ಆಂಗ್ಲ ಭಾಷೆಯ ಪ್ರಾಣಿಶಾಸ್ತ್ರ ವಿಷಯದ ಮಹಾ ಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ದೀಪಶ್ರೀ ಎಸ್. ಅವರು ಸದರಿ ಪಿ.ಎಚ್.ಡಿ.ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: