ಮೈಸೂರು

ಇನ್ನೈದು ದಿನ ಮೋಡ ಕವಿದ ವಾತಾವರಣ: ಮಳೆ ಇಲ್ಲ

ಮೈಸೂರು ಜಿಲ್ಲೆಯಲ್ಲಿ ನ.26ರಿಂದ 30ರವರೆಗೆ ಮೋಡ ಕವಿದ ವಾತಾವರಣವಿದ್ದು, ಮಳೆ ಬರುವ ಸಾಧ್ಯತೆ ಇಲ್ಲ. ದಿನದ ತಾಪಮಾನ 30 ಡಿಗ್ರಿ ಸೆಲ್ಶಿಯಸ್‍ ನಿಂದ 31 ಡಿಗ್ರಿ ಸೆಲ್ಶಿಯಸ್ ಇರಲಿದೆ. ಬೆಳಗಿನ ವೇಳೆಯ ತೇವಾಂಶ ಶೇ.76 ರಿಂದ 83 ಮತ್ತು ಮಧ್ಯಾಹ್ನದ ಬಳಿಕ 31ರಿಂದ 40 ರ ವರೆಗೆ ಇರುವ ಸಾಧ್ಯತೆ ಇದೆ. ಗಾಳಿಯ ವೇಗ ಪ್ರತಿ ಗಂಟೆಗೆ 5 ರಿಂದ 6 ಕಿ.ಮೀ. ಇರಲಿದೆ.

ರೈತರು ಕೃಷಿ ಚಟುವಟಿಕೆಗಳಲ್ಲಿ ಅನುಸರಿಸಬಹುದಾದ ಕ್ರಮಗಳ ಬಗ್ಗೆ ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ತಜ್ಞರು ಸಲಹೆ ನೀಡಿದ್ದಾರೆ. ತರಕಾರಿ ಬೆಳೆಗಳು ಹೂ ಬಿಡುವ ಹಂತದಲ್ಲಿ ರಸ ಹೀರುವ ಕೀಟಗಳು ಕಾಣಿಸಿಕೊಂಡಿವೆ. ಇದರ ಹತೋಟಿಗಾಗಿ ಪ್ರತಿ ಲೀಟರ್‍ ನೀರಿನಲ್ಲಿ 2.5 ಮಿ.ಲೀ. ಕ್ಲೋರೋಫೈರಿಫಾಸ್ ಬೆರೆಸಿ ಸಿಂಪಡಿಸಬೇಕು. ಮುಂದಿನ 5 ದಿನಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ರೈತರು ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ನೀರನ್ನು ಹಾಯಿಸುವುದು ಸೂಕ್ತ. ಮೇಲಿಂದ ಮೇಲೆ ಅಂತರ ಬೇಸಾಯ ಮಾಡಿ, ತೇವಾಂಶ ಸಂರಕ್ಷಣೆ ಮಾಡಬೇಕು. ಅಂತರ ಬೇಸಾಯ ಮಾಡುವಾಗ ಸಾಲುಗಳಿಗೆ ಮಣ್ಣು ಏರಿಸಬೇಕು.

ಕೋಳಿ ಮತ್ತು ರೇಷ್ಮೆ ಹುಳು ಸಾಕಾಣಿಕೆ ಕೇಂದ್ರಗಳಲ್ಲಿ ಸರಿಯಾದ ಉಷ್ಣಾಂಶವನ್ನು ಕಾಪಾಡಿಕೊಳ್ಳಬೇಕು.

ಪಾರಾಮೀಟರ್ 26.11.2016 27.11.2016 28.11.2016 29.11.2016 30.11.2016
ಮಳೆ(ಮಿ.ಮೀಗಳಲ್ಲಿ) 0 0 0 0 0
ಗರಿಷ್ಠ ಉಷ್ಣಾಂಶ ಡಿ.ಸೆ. 31 30 30 30 30
ಕನಿಷ್ಠ ಉಷ್ಣಾಂಶ ಡಿ.ಸೆ 16 15 15 16 16
ಆಕಾಶದ ಸ್ಥಿತಿ 0 2 7 2 7
ತೇವಾಂಶ(%)0830ಗಂಟೆಗಳಲ್ಲಿ 83 80 76 76 77
ತೇವಾಂಶ(%)1730ಗಂಟೆಗಳಲ್ಲಿ 40 40 40 31 32
ಗಾಳಿಯ ವೇಗ 5 5 5 6 6

 

Leave a Reply

comments

Related Articles

error: