ಕರ್ನಾಟಕ

ಭಾರತ ಬಂದ್ ಗೆ ಬೆಂಬಲ ನೀಡಲು ಮನವಿ

ಕೇಂದ್ರ ಸರ್ಕಾರದ ಆಡಳಿತದ ವಿರುದ್ಧ ರಾಷ್ಟ್ರದ ಎಲ್ಲಾ ವಿರೋಧ ಪಕ್ಷಗಳು ನವೆಂಬರ್ 28ರಂದು ಭಾರತ್ ಬಂದ್ ಗೆ ಕರೆ ನೀಡಿದ್ದು, ದಾವಣಗೆರೆ ಜಿಲ್ಲೆಯ ಜನತೆ ಬಂದ್ ಗೆ ಬೆಂಬಲ ನೀಡುವಂತೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷ ಡಿ.ಬಸವರಾಜ್ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಬಸವರಾಜ್, ಕಳೆದ 30 ತಿಂಗಳ ಅವಧಿ ಆಡಳಿತದಲ್ಲಿ ಪ್ರಧಾನಿ ಎಲ್ಲಾ ರಂಗಗಳಲ್ಲೂ ವಿಫಲರಾಗಿದ್ದಾರೆ. ನೋಟುಗಳನ್ನು ರದ್ದು ಮಾಡುವ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆದು ರಾಷ್ಟ್ರೀಯ ದುರಂತವನ್ನು ನಿರ್ಮಿಸಿದ್ದಾರೆಂದು ಟೀಕಿಸಿದ್ದಾರೆ.

ಕಳೆದ ಒಂದು ವಾರದಿಂದ ಸಂಸತ್ ನಡೆಯುತ್ತಿದ್ದರೂ ನೋಟ್ ರದ್ಧತಿಯ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡದೇ ಜಪಾನ್ ನಲ್ಲಿ ನೋಟ್ ರದ್ಧತಿಯ ಕುರಿತು ಮಾತನಾಡುತ್ತಾರೆ. ಮೋದಿಯವರ ನಡೆ ಸಂವಿಧಾನ ವಿರೋಧಿಯಾಗಿದ್ದು, ಪ್ರಜಾಪ್ರಭುತ್ವಕ್ಕೆ ಅವರು ಅವಮಾನ ಮಾಡಿದ್ದಾರೆಂದು ಆರೋಪಿಸಿದ್ದಾರೆ.

Leave a Reply

comments

Related Articles

error: