ದೇಶಪ್ರಮುಖ ಸುದ್ದಿ

ಕೆಸಿಇಎನ್ ಸಂಘಟನೆಗೆ ಸೇರಿದ ಭಯೋತ್ಪಾದಕನ ಬಂಧನ

ಇಂಫಾಲ್,ಮಾ.10-ಮಣಿಪುರದಲ್ಲಿ ಚಾಂದೇಲ್ ಜಿಲ್ಲೆಯ ಪ್ಯಾರಾಲೋನ್ ಎಂಬ ಹಳ್ಳಿಯಲ್ಲಿ ನಡೆದ ದಾಳಿಯಲ್ಲಿ 18 ಜನರ ಮೃತ್ಯುವಿಗೆ ಕಾರಣನಾಗಿದ್ದ ಕೆಸಿಇಎನ್ ಸಂಘಟನೆಗೆ ಸೇರಿದ ಭಯೋತ್ಪಾದಕನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ.

ಅನಿಲ್ ಶರ್ಮಾ ಅಲಿಯಾಸ್ ಮೈರಬಾ ಬಂಧಿತ ಉಗ್ರ. ಪ್ಯಾರಾಲೋನ್ ಹಳ್ಳಿಯಲ್ಲಿ ನಡೆದ ದಾಳಿಯಲ್ಲಿ 18 ಮಂದಿ ಮೃತರಾಗಿದ್ದು, 15 ಜನ ಗಂಭೀರವಾಗಿ ಗಾಯಗೊಂಡಿದ್ದರು. ಮಣಿಪುರ ಪೊಲೀಸ್ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ತನಿಖಾ ದಳ ಅನಿಲ್ ಶರ್ಮಾ ನನ್ನು ಬಂಧಿಸಿದ್ದಾರೆ.

ಶರ್ಮಾನನ್ನು ಇಂಫಾಲ್ ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು. ಹತ್ತು ದಿನಗಳ ಕಾಲ ಆತನನ್ನು ನ್ಯಾಯಾಲಯ ಬಂಧನದಲ್ಲಿರಿಸಲು ನ್ಯಾಯಾಲಯ ಆದೇಶಿಸಿದೆ. (ಎಂ.ಎನ್)

Leave a Reply

comments

Related Articles

error: