ಮೈಸೂರು

ಧ್ವನಿ ವಿಜ್ಞಾನ ಕುರಿತು ರಾಷ್ಟ್ರೀಯ ಕಾರ್ಯಾಗಾರ

ಜೆಎಸ್‍ಎಸ್‍ ವಾಕ್‍ ಶ್ರವಣ ಸಂಸ್ಥೆ ವತಿಯಿಂದ “ಧ್ವನಿ ವಿಜ್ಞಾನದ ಬಳಕೆಯಿಂದ ಮಾತು ಹಾಗೂ ಧ್ವನಿಯ ವಿಶ್ಲೇಷಣೆ” ಕುರಿತು ರಾಷ್ಟ್ರೀಯ ಕಾರ್ಯಾಗಾರವನ್ನು ನ. 24-26 ರ ವರೆಗೆ ಹಮ್ಮಿಕೊಂಡಿದೆ.

ಮೈಸೂರಿನ ಎಂ.ಜಿ. ರಸ್ತೆಯ ಶ್ರೀ ರಾಜೇಂದ್ರ ಭವನದಲ್ಲಿ ನ.24ರಂದು ಕಾರ್ಯಾಗಾರಕ್ಕೆ ಅಖಿಲ ಭಾರತ ವಾಕ್‍ ಶ್ರವಣ ಸಂಸ್ಥೆ – ಮೈಸೂರು ನಿರ್ದೇಶಕರಾದ ಆರ್‍. ಸಾವಿತ್ರಿ ಮತ್ತು ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ. ನ. ರತ್ನರವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜೆಸ್‍ಎಸ್‍ ವಾಕ್‍ ಶ್ರವಣ ಸಂಸ್ಥೆಯ ನಿರ್ದೇಶಕರಾದ ಎನ್‍.ಪಿ. ನಟರಾಜ್ ಅವರು ವಹಿಸಿದ್ದರು.

ಶಬ್ದ ಶಾಸ್ತ್ರದ ಪ್ರಾಮುಖ್ಯತೆ ಮತ್ತು ಧ್ವನಿ ವಿಜ್ಞಾನದ ಮಹತ್ವದ ಬಗ್ಗೆ ಕಾರ್ಯಕ್ರಮದ ಮುಖ್ಯ ಅತಿಥಿಗಳು ಸವಿಸ್ತಾರವಾಗಿ ವಿವರಿಸಿದರು.  ನಂತರ ಮಾತನಾಡಿದ ನ. ರತ್ನ ಅವರು, ವಾಕ್‍ ಶ್ರವಣ ದೋಷವುಳ್ಳವರಿಗೆ ಸಹಾಯ ಮಾಡಲು ಈ ರೀತಿಯ ಕಾರ್ಯಾಗಾರಗಳು ಸಹಕಾರಿಯಾಗುತ್ತವೆ. ಸಂಸ್ಥೆಯ ಉಪಯೋಗದ ಬಗ್ಗೆ ಇಲ್ಲಿ ಭಾಗವಹಿಸುವವರು ತಿಳಿದು-ತಿಳಿಸಬೇಕಾದ ಅವಶ್ಯಕತೆ ಇದೆ ಎಂದು ಕಿವಿಮಾತು ಹೇಳಿದರು.

ಸಂಸ್ಥೆಯ ನಿರ್ದೇಶಕ ಡಾ. ಎನ್‍.ಪಿ. ನಟರಾಜ ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ವೈದ್ಯಕೀಯ ಹಾಗೂ ಇತರ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಉಪಯೋಗಗಳ ಬಗ್ಗೆ ಸವಿವರವಾಗಿ ತಿಳಿಸಿ ಈ ವಿಷಯದ ಬಗ್ಗೆ ಹೆಚ್ಚು ಸಂಶೋಧನೆ ನಡೆಸಲು ಅಭ್ಯರ್ಥಿಗಳು ಪ್ರಯತ್ನಿಸಬೇಕು. ಈ ಉದ್ದೇಶದಿಂದಲೇ ಸಂಸ್ಥೆಯ ಧ್ವನಿ ವಿಜ್ಞಾನ  ಪ್ರಯೋಗಾಲಯದಲ್ಲಿ ಎಲ್ಲ ರೀತಿಯ ಪರಿಕರಗಳನ್ನು ಒದಗಿಸಲಾಗಿದೆ ಎಂದರು.

ಕಾರ್ಯಾಗಾರದಲ್ಲಿ ತಂತ್ರಾಂಶ ಬಳಸಿ ಮಾತು ಹಾಗೂ ಧ್ವನಿಯ ಪರಿಶೀಲನೆ, ಧ್ವನಿಯ ತೊಂದರೆಯನ್ನು ಗುರುತಿಸಿ ಅದಕ್ಕೆ ಸೂಕ್ತ ಪರಿಹಾರ ನೀಡುವ ಬಗ್ಗೆ ವಿವರಿಸಲಾಗುವುದು. ಕಾರ್ಯಾಗಾರದಲ್ಲಿ ಭಾಗವಹಿಸಲು ದೇಶದ ವಿವಿಧ ವಾಕ್‍ ಶ್ರವಣ ಸಂಸ್ಥೆಗಳಿಂದ ಸುಮಾರು 75 ಜನ ವಿದ್ಯಾರ್ಥಿ-ಅಧ್ಯಾಪಕ ಸಿಬ್ಬಂದಿ ಆಗಮಿಸಿದ್ದಾರೆ.

Leave a Reply

comments

Related Articles

error: