ಮೈಸೂರು

ಶ್ಯಾದನಹಳ್ಳಿ ಭೂಮಿ ಬೆಂಕಿ ಪ್ರಕರಣ : ಮತ್ತೋರ್ವ ಗಾಯಾಳು ಸಾವು

ಮೈಸೂರು,ಮಾ.10:- ಶ್ಯಾದನಹಳ್ಳಿ ಭೂಮಿ ಬೆಂಕಿಗೆ ಬಾಲಕ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದ ಮತ್ತೋರ್ವ ಕೂಡಾ ಇಂದು ಸಾವನ್ನಪ್ಪಿದ್ದಾನೆ.

ಪ್ರಕರದಲ್ಲಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮತ್ತೋರ್ವ  ಬಾಲಕ  ಗಾಯಾಳು ಮಂಜುನಾಥ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಇಲ್ಲಿ ಬೆಂಕಿ ಗಾಯಗಳಿಂದ ಬಳಲಿ ಬಾಲಕ ಹರ್ಷಲ್ ಸಾವನ್ನಪ್ಪಿದ್ದ. ಹರ್ಷಲ್ ಸಾವಿನ ಬಳಿಕ ಮತ್ತೊಬ್ಬ ಗಾಯಾಳು ಮಂಜುನಾಥ್ ಕೂಡ ಸಾವನ್ನಪ್ಪಿದ್ದಾನೆ. ಶ್ಯಾದನಹಳ್ಳಿ ಹೊರವಲಯದಲ್ಲಿ ಕ್ರಿಕೆಟ್ ಆಡುವ ವೇಳೆ ಹರ್ಷಲ್  ಬೆಂಕಿಗೆ ಬಿದ್ದಿದ್ದ. ಬಳಿಕ ಬಹಿರ್ದೇಸೆಗೆ ತೆರಳಿದ್ದ ವೇಳೆ ಮಂಜುನಾಥ್ ಎಂಬಾತ ಗಾಯಗೊಂಡಿದ್ದ . ಈತ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ.. ಚಿಕಿತ್ಸೆ ಫಲಿಸದೆ ಮಂಜುನಾಥ್ ಕೂಡ ಸಾವನ್ನಪ್ಪಿದ್ದಾನೆ. ಭೂಮಿ ಬೆಂಕಿಗೆ ಒಟ್ಟು 2 ಮಂದಿ ಸಾವನ್ನಪ್ಪಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: