ಮೈಸೂರು

ಕೊನೆಗೂ ವಿವಾದಿತ ಪೊಲೀಸ್  ಆಯುಕ್ತರ ಕಚೇರಿ ಉದ್ಘಾಟನೆಗೆ ಗೈರಾದ ಸಿಎಂ ಸಿದ್ದರಾಮಯ್ಯ

ಮೈಸೂರು.ಮಾ.10:-  ಕೊನೆಗೂ ವಿವಾದಿತ ಪೊಲೀಸ್  ಆಯುಕ್ತರ ಕಚೇರಿ ಉದ್ಘಾಟನೆಗೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾಗಿದ್ದಾರೆ.

ನ್ಯಾಯಾಲಯದ ಆದೇಶಕ್ಕೆ  ಸಿಎಂ ಸಿದ್ದರಾಮಯ್ಯ ತಲೆಬಾಗಿದ್ದಾರೆ. ಮೈಸೂರಿನ ನಜರ್ ಬಾದ್ ನಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಪೊಲೀಸ್ ಆಯುಕ್ತರ ಕಚೇರಿ ಪಾರ್ಕ್ ಜಾಗದಲ್ಲಿ ನಿರ್ಮಾಣವಾಗಿದೆ ಎಂಬುದು ವಿವಾದವಿದೆ. ಈ ಕುರಿತು ಮೈಸೂರಿನ ಅಶೋಕ್ ಕುಮಾರ್ ಎಂಬುವರು ಹೈ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು. ದಾಖಲೆ ಪರಿಶೀಲನೆ ನಡೆಸಿದ್ದ ಕೋರ್ಟ್ ಮಾರ್ಚ್ 21 ರ ವರೆಗೆ ಕಾಮಗಾರಿಗೆ ಸ್ಟೇ ನೀಡಿದೆ. ಹೀಗಿದ್ದೂ ಇಂದು ಕಟ್ಟಡ ಉದ್ಘಾಟನೆಗೆ ಪೊಲೀಸ್ ಇಲಾಖೆ ಸಿದ್ಧತೆ ನಡೆಸಿತ್ತು. ಕಟ್ಟಡ ಉದ್ಘಾಟನೆಯಿಂದ ನ್ಯಾಯಾಂಗ ನಿಂದನೆಯಾಗುತ್ತೆ ಎಂಬ ಕಾರಣಕ್ಕೆ  ಮುಖ್ಯಮಂತ್ರಿಗಳು ಗೈರಾಗಿದ್ದಾರೆ. ಕೊನೆಗೂ  ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಿದ ಸಿದ್ದರಾಮಯ್ಯನವರು  ಕಾರ್ಯಕ್ರಮದಿಂದ ದೂರವುಳಿದಿದ್ದಾರೆ. ಕಾರ್ಯಕ್ರಮಕ್ಕೆ ಬಂದ ಜನರೆಲ್ಲಾ ವಾಪಸ್ಸು ತೆರಳಿದ್ದಾರೆ. (ಕೆ.ಎಸ್,ಎಸ್.ಎಚ್).

Leave a Reply

comments

Related Articles

error: