ಮೈಸೂರು

ದ್ವಿಚಕ್ರವಾಹನ ಅಪಘಾತ : ಕಾನೂನು ವಿದ್ಯಾರ್ಥಿ ಸಾವು

ಮೈಸೂರು, ಮಾ.12:- ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರೋರ್ವರು ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತರನ್ನು ರಾಮಕೃಷ್ಣನಗರ ನಿವಾಸಿ ಬಸವರಾಜು ಎಂಬುವರ ಪುತ್ರ, ಜೆಎಸ್‌ಎಸ್‌ ಕಾನೂನು ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಬಿ.ಮಹಾಂತ್‌ (21) ಎಂದು ಗುರುತಿಸಲಾಗಿದ್ದು, ಇವರು ವಿಜಯನಗರ ಕಡೆಯಿಂದ ಶನಿವಾರ ಮಧ್ಯರಾತ್ರಿ ತನ್ನ ಮನೆಯ ಕಡೆ ಹೊರಟಾಗ ನಿಯಂತ್ರಣ ಕಳೆದುಕೊಂಡ ದ್ವಿಚಕ್ರವಾಹನ ಪಾದಚಾರಿ ಮಾರ್ಗಕ್ಕೆ ನುಗ್ಗಿದ್ದು, ಅಪಘಾತ ಸಂಭವಿಸಿದೆ. ಹಿಂಬದಿ ಸವಾರ ಜಗನ್‌ (19) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡ ಮಹಾಂತ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಜಗನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ  ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: