
ಮೈಸೂರು
ಭಾರತದ ಸಂವಿಧಾನಕ್ಕೆ ಸಾಟಿ ಯಾವುದೂ ಇಲ್ಲ : ಡಾ.ಸಿ.ಕೆ.ಎನ್ .ರಾಜ್
ಜಗತ್ತಿನಲ್ಲಿಯೇ ಅತ್ಯುನ್ನತವಾದ ಸಂವಿಧಾನವನ್ನು ಡಾ.ಬಿ.ಆರ್ ಅಂಬೇಡ್ಕರ್ ಅವರು ನೀಡಿದ್ದಾರೆ. ಭಾರತದ ಸಂವಿಧಾನ ಈ ನೆಲದ ಶ್ರೇಷ್ಠ ಕಾನೂನು ಎಂದು ಕಾನೂನು ತಜ್ಞ ಡಾ.ಸಿ.ಕೆ.ಎನ್.ರಾಜ್ ಅಭಿಪ್ರಾಯಪಟ್ಟರು.
ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾದ ಕಾನೂನು ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ.ಸಿ.ಕೆ.ಎನ್.ರಾಜ್ ಮಾತನಾಡಿದರು. ನಾನು ಹಲವು ದೇಶಗಳ ಸಂವಿಧಾನವನ್ನು ಓದಿದ್ದೇನೆ. ಆದರೆ ಅವುಗಳೆಲ್ಲವುಗಳಿಗಿಂತ ಭಾರತದ ಸಂವಿಧಾನ ಭಿನ್ನವಾಗಿದ್ದು, ಶ್ರೇಷ್ಠವಾಗಿದೆ. ಅದಕ್ಕೆ ಯಾವುದೂ ಸಾಟಿಯಿಲ್ಲ ಎಂದರು.
ಇಂದಿನ ಕ್ರಿಕೆಟ್ ಗೆ ಹೋಲಿಸುವುದಾದರೆ ಮ್ಯಾನ್ ಆಫ್ ದಿ ಮ್ಯಾಚ್ ಮತ್ತು ಮ್ಯಾನ್ ಆಫ್ ದಿ ಸಿರಿಸ್ ಎರಡೂ ಪ್ರಶಸ್ತಿಗಳೂ ಅವರಿಗೇ ಸಲ್ಲಬೇಕು. ಅದು ಅವರಿಗೇ ಸಲ್ಲಬೇಕಾದ ಕೊಡುಗೆ ಎಂದು ಬಣ್ಣಿಸಿದರು.
ಪ್ರತಿವರ್ಷ ನವೆಂಬರ್ 26ರಂದು ಸಂವಿಧಾನದಿನವನ್ನಾಚರಿಸಲಾಗುತ್ತದೆ. ಅಂದು ಸಂವಿಧಾನದ ಮಹತ್ವವವನ್ನು ಎಲ್ಲೆಡೆ ಸಾರಲಾಗುತ್ತದೆ ಎಂದು ತಿಳಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ಧ್ರುವಕುಮಾರ್, ಲೇಖಕ ನಾಗಸಿದ್ದಾರ್ಥ ಹೊಲೆಯಾರ್, ಪಾಲಿಕೆ ಸದಸ್ಯ ಎಂ.ವಿ.ರಾಂ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.