ಮೈಸೂರು

ಸಿ.ಎಂ.ಆಪ್ತೆ ಹೆಸರಲ್ಲಿ ಭಾರಿ ಅಕ್ರಮ ನಡೆಯುತ್ತಿದೆ : ಆರೋಪ

ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಅವರು ಟೆಂಡರ್ ಹಂಚಿಕೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಎಸಿಬಿಗೆ ದೂರು ದಾಖಲು ಮಾಡಿರುವ ಮಂಡ್ಯದ ಗುತ್ತಿಗೆದಾರ ಬಸವೇಗೌಡ ಹಾಗೂ ವೀರ ಕನ್ನಡಿಗ ಮಕ್ಕಳ ಬಳಗದ ಅಧ‍್ಯಕ್ಷ ಎಸ್.ಸಿ.ರಾಜೇಶ್ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಗೆ ಪರಮಾಪ್ತೆ ಎಂದು ಹೇಳಿಕೊಂಡು ಓಡಾಡುತ್ತಿರುವ ಗೀತಾ ಚನ್ನಪಟ್ಟಣ ಲೋಕೋಪಯೋಗಿ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ಮಾಡುತ್ತಿದ್ದಾರೆಂದು ಆರೋಪಿಸಿದರು.

ಸಚಿವ ಮಹದೇವಪ್ಪ ವಿರುದ್ದ ಎಸಿಬಿ ದೂರು ದಾಖಲಿಸಿ 10 ದಿನ ಕಳೆದರೂ ಈ ತನಕ ಎಫ್ಐಆರ್ ದಾಖಲಿಸದ ಪೊಲೀಸ್ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಇನ್ನು ಲೋಕೋಪಯೋಗಿ ಇಲಾಖೆಯಲ್ಲಿ ಸಚಿವ ಮಹದೇವಪ್ಪನವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಜನಾರ್ಧನ್ ಹಾಗೂ ಸಿ.ಎಂ. ಗೆ ಆಪ್ತೆ ಎಂದು ಹೇಳಿ ಫೋಟೋ ತೆಗೆಸಿಕೊಂಡಿರುವ ಗೀತಾ ಚನ್ನಪಟ್ಟಣ ಇಬ್ಬರೂ ಸೇರಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಸ್ವತಃ ಸಿ.ಎಂ ಸಿದ್ದರಾಮಯ್ಯನವರೇ ಆದೇಶ ಮಾಡಿದ್ದರೂ ಕ್ಯಾರೆ ಎನ್ನದ ಜನಾರ್ಧನ್ ಉದ್ದೇಶಪೂರ್ವಕವಾಗಿ ಗುತ್ತಿಗೆದಾರರಿಗೆ ತೊಂದರೆ ನೀಡುತ್ತಿದ್ದಾರೆ. ಇಡೀ ಇಲಾಖೆಯಲ್ಲಿ ಅವರು ಹೇಳಿದ್ದೇ ನಡೆಯಬೇಕು ಎನ್ನುವಂತಾಗಿದೆ . ಈ ಬಗ್ಗೆ ನಮ್ಮ ಬಳಿ ಕೆಲವು ಆಡಿಯೋ ಕ್ಲಿಪ್ಪಿಂಗ್ ಇವೆ. ಅದರಲ್ಲಿ ಗೀತಾ ಅವರು 5 ಕೋಟಿ ರೂ.ಟೆಂಡರ್ ಪಡೆದು ಅದನ್ನು ಬೇರೊಬ್ಬರಿಗೆ ಮಾರಾಟ ಮಾಡಿರುವ ಸಂಗತಿಯೂ ಬೆಳಕಿಗೆ ಬಂದಿದೆ ಎಂದು ಆರೋಪಿಸಿದರಲ್ಲದೇ ಆಡಿಯೋ ಕ್ಲಿಪ್ಪಿಂಗ್ ನ್ನು ಬಿಡುಗಡೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವೀರ ಕನ್ನಡಿಗ ಮಕ್ಕಳ ಬಳಗದ ಉಪಾಧ್ಯಕ್ಷ ಜಗದೀಶ್, ಬಿ.ಜೆ.ಪಿ.ಜಿಲ್ಲಾ ಕಾರ್ಯದರ್ಶಿ ಎಂ.ಎಸ್.ಮಂಜುನಾಥ್ ಹಾಜರಿದ್ದರು.

Leave a Reply

comments

Related Articles

error: