ಪ್ರಮುಖ ಸುದ್ದಿಮೈಸೂರು

ಜ್ಯೋತಿ ನಗರದಲ್ಲಿರುವ ಪೊಲೀಸ್ ಕ್ವಾರ್ಟರ್ಸ್ ಆವರಣದಲ್ಲಿ ಸ್ವಚ್ಛತಾ ಕಾರ್ಯ

ಸ್ವಚ್ಛತಾ ಅಭಿಯಾನದ ಅಂಗವಾಗಿ ಜಿಲ್ಲಾಧಿಕಾರಿ ಡಿ. ರಂದೀಪ್, ಎಸ್‍ಪಿ ರವಿ ಡಿ. ಚನ್ನಣ್ಣನವರ್, ಎಎಸ್‍ಪಿ ಕಲಾ ಕೃಷ್ಣಮೂರ್ತಿ, ಮೇಯರ್ ಬಿ.ಎಲ್. ಭೈರಪ್ಪ, ಪಾಲಿಕೆ ಆಯುಕ್ತ ಜೆ.ಜಗದೀಶ್ ಮತ್ತು ಇತರರು ಶನಿವಾರದಂದು ಬೆಳಗ್ಗೆ ಜ್ಯೋತಿ ನಗರದಲ್ಲಿರುವ ಪೊಲೀಸ್ ಕ್ವಾರ್ಟರ್ಸ್ ಆವರಣವನ್ನು ಸ್ವಚ್ಛಗೊಳಿಸಿದರು.

ತಾವು ವಾಸಿಸುವ ಸ್ಥಳದ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಎಲ್ಲರೂ ತಮ್ಮ ಮನೆಯ ಆವರಣವನ್ನು ಸ್ವಚ್ಛವಾಗಿಟ್ಟಲ್ಲಿ ತನ್ನಿಂತಾನೆ ನಗರವೂ ಸ್ವಚ್ಛವಾಗುವುದು. ಸಮಾಜವನ್ನು ಸ್ವಚ್ಛವಾಗಿಡಲು ಪೊಲೀಸರು ಹಗಲು ರಾತ್ರಿಯೆನ್ನದೆ ಕೆಲಸ ಮಾಡುತ್ತಾರೆ. ಮನೆಯ ಆವರಣವನ್ನು ಸ್ವಚ್ಛವಾಗಿಡುವುದು ಅವರ ಕುಟುಂಬದವರ ಕರ್ತವ್ಯ ಎಂದು ಚನ್ನಣ್ಣನವರ್ ಹೇಳಿದರು.

ಮೈಸೂರು ಸತತ ಎರಡು ಬಾರಿ ದೇಶದಲ್ಲೇ ಸ್ವಚ್ಛ ನಗರಿ ಎಂಬ ಬಿರುದನ್ನು ತೆಗೆದುಕೊಂಡಿದೆ. ಈ ಬಿರುದು ನಮ್ಮಲ್ಲೇ ಇರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.

ಈ ತಂಡವು ಬನ್ನೂರು ರಸ್ತೆಯಲ್ಲಿರುವ ಪೇ ಅಂಡ್ ಯೂಸ್ ಟಾಯ್ಲೆಟ್ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿತು. ನಗರದಲ್ಲಿರುವ ಸಾರ್ವಜನಿಕೆ ಶೌಚಾಲಯಗಳಿಗೆ ಭೇಟಿ ನೀಡಿ ಶುಚಿತ್ವ ಮತ್ತು ನೀರಿನ ವ್ಯವಸ್ಥೆ ಸರಿಯಾಗಿದೆಯೇ ಎಂದು ಪರಿಶೀಲಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

clean-campaign-1

Leave a Reply

comments

Related Articles

error: