ಮೈಸೂರು

‘ಸ್ಮಾಲ್ ಈಸ್ ಬ್ಯೂಟಿಫುಲ್’ ಕೃತಿ ವಿಶ್ಲೇಷಣೆ

ಟಾಲ್ಸ್ಟಾಯ್, ಗಾಂಧೀಜಿಯವರಂತಹ ಗಣ್ಯರನ್ನು ಪ್ರವಾವಿಸಿದ್ದ ತೋರೋ ಅವರ ವಾಲ್ಡನ್‍ನಂತರ ಕೃತಿ ಜಗತ್ತಿನ ಆರ್ಥಿಕ ಚಿಂತನೆಯನ್ನು ಬದಲಾಯಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಈ ಕೃಷಿಯ ಮುಂದುವರಿಕೆಯಂತೆ ರೂಪುಗೊಂಡ ಕೃತಿ ಹಿಂದ್‍ ಸ್ವರಾಜ್‍. ಇದರಿಂದ ಪ್ರೇರಣೆಗೊಂಡು ಜೆ.ಸಿ. ಕುಮಾರಪ್ಪ, ಸುಮೇಕರ್ ಇವರುಗಳು ಆಧುನಿಕ ಅರ್ಥಶಾಸ್ತ್ರಜ್ಞರಿಗಿಂತ ಭಿನ್ನವಾದ ಚಿಂತನೆಗಳನ್ನು ತಮ್ಮ ಕೃತಿಗಳಲ್ಲಿ ಮಂಡಿಸತೊಡಗಿದರು.

ಈ ನೆಲೆಯಲ್ಲಿ ಸುಮೇಕರರ ಸ್ಮಾಲ್‍ ಈಸ್ ಬ್ಯೂಟಿಫುಲ್ ವಿಶಿಷ್ಟವಾದುದು. ಬೌದ್ಧ ಧರ್ಮದ ಆರ್ಥಿಕ ಚಿಂತನೆಗಳನ್ನು ಸುಮೇಕರರು ತಮ್ಮ ಪ್ರಮೇಯಗಳಿಗೆ ತಳಹದಿಯಾಗಿಸಿಕೊಂಡಿದ್ದಾರೆ. ಅಲ್ಲಿ ನ ಚಿಂತನೆಗಳಲ್ಲಿ ಮುಖ್ಯವಾದವುಗಳೆಂದರೆ, ಸ್ಥಳೀಯ ಸಂಪನ್ಮೂಲಗಳನ್ನು ಸ್ಥಳೀಯರೇ ಬಳಸಬೇಕೆಂಬುದು. ಅರ್ಥಶಾಸ್ತ್ರಜ್ಞರು ಉತ್ತಮ ಜೀವನಮಟ್ಟ ಎಂಬುದರ ಬಗ್ಗೆ ವ್ಯಾಖ್ಯಾನ ಮಾಡುವಲ್ಲಿ ವಿಫಲರಾಗಿದ್ದಾರೆ. ಈ ವಿಷಯಕ್ಕೆ ಸ್ಮಾಲ್ ಈಸ್ ಬ್ಯೂಟಿಫುಲ್ ಕೃತಿಯಲ್ಲಿ ಸಮಪರ್ಕವಾದ ಉತ್ತರ ಸಿಗುತ್ತದೆ. ಆಧುನಿಕರು ಇಂದು ಐಶಾರಾಮಿ ಬದುಕಿನ ಬೆನ್ನತ್ತಿ ಖಿನ್ನತೆಗಳಿಗೆ ಬಲಿಯಾಗಿದ್ದಾರೆ. ಅಂತಹವರ ವ್ಯಕ್ತಿತ್ವ ವಿಕಸನಕ್ಕೆ ಈ ಕೃತಿ ಮಾದರಿಯಾಗಿದೆ.

ಮೈಸೂರಿನ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‍ ವತಿಯಿಂದ ನಡೆಸುತ್ತಿರುವ ಜಿ. ಶ್ರೀನಿವಾಸ್‍ಕುಮಾರ್‍ ನೆನಪಿನ ಉಪನ್ಯಾಸ ಸರಣಿಯಲ್ಲಿ ಈ ಕೃತಿಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೃತಿಯ ಕುರಿತು ಎಂ.ಆರ್. ಚಿಂತಾಮಣಿಯವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಡಾ. ಸಿ.ಎನ್. ರಘುಪತಿ ಪ್ರತಿಕ್ರಿಯೆ ನೀಡುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಬಿ. ಮಹೇಶ್ ಹರವೆ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಕಾರ್ಯಕ್ರಮವು ಕಲಾಮಂದಿರದ ಮನೆಯಂಗಳದಲ್ಲಿ ನ. 27ರಂದು ಭಾನುವಾರ ಬೆಳಗ್ಗೆ 10.30ಕ್ಕೆ ನಡೆಯಲಿದೆ.

Leave a Reply

comments

Related Articles

error: