ಮೈಸೂರು

ಹೆಚ್.ವಿ.ರಾಜೀವ್ ಸ್ನೇಹ ಬಳಗದಿಂದ ಅಂತಿಮ ಯಾತ್ರೆ ವಾಹನ ಕೊಡುಗೆ

ಮೈಸೂರು,ಮಾ.12 : ಸಮಾಜ ಸೇವಕ ಬ್ರಾಹ್ಮಣ ಮುಖಂಡ ಹೆಚ್.ವಿ.ರಾಜೀವ್ ಮತ್ತು ಸ್ನೇಹ ಬಳಗದವರಿಂದ ಅಂತಿಮ ಯಾತ್ರೆಯ ವಾಹನವನ್ನು ಬ್ರಾಹ್ಮಣ ಧರ್ಮ ಸಹಾಯ ಸಭಾಕ್ಕೆ ಕೊಡುಗೆಯಾಗಿ ನೀಡಲಾಯಿತು.

ಸೂಕ್ತ ವಾಹನ ವ್ಯವಸ್ಥೆಯಿಲ್ಲದೆ ಶವ ಸಾಗಾಣಿಕೆಯಲ್ಲಿ ಉಂಟಾಗುತ್ತಿದ್ದ ಅನಾನುಕೂಲತೆಯನ್ನು ಮನಗಂಡು ಬಳಗವು 10,65 000 ಮೌಲ್ಯದ ವಾಹನವನ್ನು ಕೊಡುಗೆಯಾಗಿ ನೀಡಿತು.

ಕಾರ್ಯಕ್ರಮದಲ್ಲಿ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಮಾಜಿ ಸಚಿವರಾದ ಕೆ.ಸುರೇಶ್ ಕುಮಾರ್, ಎಸ್.ಎ.ರಾಮದಾಸ್ ಮುಖಂಡರಾದ ಕೆ.ಎನ್.ವೆಂಕಟನಾರಾಯಣ್, ಹಾರನಹಳ್ಳಿ ಅಶೋಕ್,ಗೋ.ಮಧುಸೂದನ್, ಕೆ.ಆರ್.ಮೋಹನ್ ಕುಮಾರ್, ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಇದ್ದರು. ಸಭಾದ ಅಧ್ಯಕ್ಷ ಎನ್.ಶ್ರೀನಿವಾಸ ಅಧ್ಯಕ್ಷತೆ ವಹಿಸಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: