ಮೈಸೂರು

ಸಂಶೋಧನಾ ಪ್ರಾಜೆಕ್ಟ್ ನಲ್ಲಿ ಕಾರ್ಯನಿರ್ವಹಿಸಲು ಅಭ್ಯರ್ಥಿಗಳು ಬೇಕಾಗಿದ್ದಾರೆ

.ಮೈಸೂರು,ಮಾ.12 : ಮೈಸೂರು ವಿವಿಯ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರದಲ್ಲಿ, ಭಾರತ ಸರ್ಕಾರದ ರಾಷ್ಟ್ರೀಯ ಮಹಿಳಾ ಆಯೋಗ ಪ್ರಾಯೋಜಿತ ಕರ್ನಾಟಕ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಒನ್ ಸ್ಟಾಪ್ ಸೆಂಟರ್ ಗಳ ಕುರಿತು ಮೌಲ್ಯಮಾಪನ ಸಂಶೋಧನಾ ಪ್ರಾಜೆಕ್ಟ್ ನಲ್ಲಿ ಕಾರ್ಯನಿರ್ವಹಿಸಲು ಇಬ್ಬರು ಸಂಶೋಧಕ/ಕ್ಷೇತ್ರ ಸಹಾಯಕರನ್ನು ಒಂದು ವರ್ಷದ ಮಟ್ಟಿಗೆ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಯಾವುದೇ ಸಾಮಾಜಿಕ ವಿಜ್ಞಾನದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಒಂದು ವರ್ಷದ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸ್ವವಿವರ ಬಯೋ ಡೇಟಾ, ನೋಂದಾಯಿತ ಅಂಚೆ/ಕೋರಿಯರ್ ಮೂಲಕ ಡಾ.ನಂಜುಂಡ, ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರ, ಮಾನವಿಕ ವಿಭಾಗ ಕಟ್ಟಡ, ಮಾಸನಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ ಈ ವಿಳಾಸಕ್ಕೆ ಮಾ.23ರೊಳಗೆ ತಲುಪಿಸಬಹುದು. ಮಾಹಿತಿಗಾಗಿ ಮೊ.ನಂ.9880964840, 0821-2419637. (ಕೆ.ಎಂ.ಆರ್)

Leave a Reply

comments

Related Articles

error: