ಮೈಸೂರು

ಉನ್ನತ ಮಟ್ಟಕ್ಕೇರಿದ ಮಾತ್ರಕ್ಕೆ ತಾಯ್ನೆಲ ಮರೆಯದಿರಿ : ಡಾ.ಕೆ.ಎಸ್.ಚಂದ್ರಶೇಖರ್

 

ನಾವು ಎಷ್ಟೇ ಉನ್ನತ ಮಟ್ಟಕ್ಕೆ ಏರಿದರೂ, ಯಾವ ದೇಶದಲ್ಲೇ ನೆಲೆಸಿದರೂ ತಾಯಿ ನೆಲವನ್ನು ಮಾತ್ರ ಮರೆಯಬಾರದು. ನಮ್ಮ ಏಳಿಗೆಗೆ ಕಾರಣವಾದ ಸಮಾಜದ ಋಣ ತೀರಿಸಬೇಕು ಎಂದು ವಿಶ್ರಾಂತ ಪಾಧ್ಯಾಪಕ ಡಾ.ಕೆ.ಎಸ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಶನಿವಾರ ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಹುಲಗಾದ್ರಿ ಟ್ರಸ್ಟ್ ಮತ್ತು ಡಾ.ಮೀರಾ ವಿ.ನಾಥನ್ ಅವರ ಆಶ್ರಯದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಚಂದ್ರಶೇಖರ್ ಮಾತನಾಡಿದರು. ವಿದ್ಯೆ ಕದಿಯಲಾರದ ಆಸ್ತಿ. ಅದು ಯಾರ ಸ್ವತ್ತೂ ಅಲ್ಲ. ಪ್ರತಿಯೊಬ್ಬರಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಆದರೆ, ಕೆಲವರು ಪ್ರತಿಭಾವಂತರಾಗಿದ್ದರೂ ಅನೇಕ ಕಾರಣಗಳಿಂದ ಸೌಲಭ್ಯಗಳಿಲ್ಲದೆ ಶಿಕ್ಷಣದಿಂದ ವಂಚಿತರಾಗಿತ್ತಾರೆ. ಅಂತಹವರನ್ನು ಗುರುತಿಸಿ ಅವರಿಗೂ ಶಿಕ್ಷಣ ಸೌಲಭ್ಯ ನೀಡುವ ಉದ್ದೇಶದಿಂದ ನಮ್ಮ ತಂದೆ ತಾಯಿಯ ಹೆಸರಿನಲ್ಲಿ ವಿದ್ಯಾರ್ಥಿ ವೇತನ ನೀಡಲು ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.

ನಮ್ಮ ಏಳಿಗೆಗೆ ಪೋಷಕರು, ಶಿಕ್ಷಕರೊಂದಿಗೆ ಸಮಾಜವೂ ತನ್ನದೇ ಆದ ಕೊಡುಗೆ ನೀಡುತ್ತದೆ. ಹಾಗಾಗಿ ಉನ್ನತ ಶಿಕ್ಷಣ ಪಡೆದು ದೊಡ್ಡ ಹುದ್ದೆ ಪಡೆದು ವಿದೇಶಗಳಲ್ಲಿ ನೆಲೆಸಿದ ಮಾತ್ರಕ್ಕೆ ನಮ್ಮ ಕರ್ತವ್ಯ ಮುಗಿಯುವುದಿಲ್ಲ. ಬದಲಾಗಿ ಸಮಾಜದಿಂದ ನಾವು ಪಡೆದುಕೊಂಡಿದ್ದನ್ನು ಮರಳಿ ನೀಡಬೇಕು. ನಮ್ಮ ಮೇಲಿರುವ ಸಮಾಜದ ಋಣವನ್ನು ತೀರಿಸಬೇಕು. ಆಗ ಮಾತ್ರ ನಮ್ಮ ಕರ್ತವ್ಯ ಪರಿಪೂರ್ಣವಾಗುತ್ತದೆ ಎಂದರಲ್ಲದೇ, ಶಿಕ್ಷಣದಿಂದ ವಂಚಿತದಾದವರಿಗೆ ನಿಮ್ಮ ಕೈಲಾಸದಷ್ಟು ಸಹಾಯ ಮಾಡಿ ಅವರನ್ನೂ ಕೈಹಿಡಿದು ಮುನ್ನಡೆಸಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅಭಯ್ ಕುಮಾರ್, ಅಭಯ್, ಅಭಿಜಿತ್, ಅಭಿರಾಮ್, ಅಭಿಷೇಕ್ ಸೇರಿದಂತೆ 600 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ವೈದ್ಯೆ ಹಾಗೂ ದಾನಿ ಡಾ.ಮೀರಾ ವಿ.ನಾಥನ್, ಹುಲಗಾದ್ರಿ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಜಿ.ಆರ್.ನಾಗರಾಜು, ರಾಮಕೃಷ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

Leave a Reply

comments

Related Articles

error: