ಕರ್ನಾಟಕ

ಈಜಲು ಹೋದ ಇಬ್ಬರು ನೀರುಪಾಲು

ಹಾವೇರಿ, ಮಾ.12: ಈಜಲುಲೆಂದು ಹೋದ ಇಬ್ಬರು ನೀರುಪಾಲಾಗಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ನಾಗನೂರು ಕೆರೆಯಲ್ಲಿ ನಡೆದಿದೆ.

ಮೃತರನ್ನು ನಗರದ ಮೌಲಾಲಿ ಬಡಾವಣೆಯ ನಿವಾಸಿಗಳು ಸಾಹಿಲ್ ಹಾವೇರಿ(14) ಮತ್ತು ಖಾಜಾ ಮಂತ್ರೋಡಿ(14) ಎಂದು ಗುರುತಿಸಲಾಗಿದ್ದು,  ಮಧ್ಯಾಹ್ನ ಸೈಕಲ್ ಮೇಲೆ ಕೆರೆಗೆ ಈಜಲು ತೆರಳಿದ್ದರು, ಈ ವೇಳೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಕೆರೆಯಲ್ಲಿ ಶೋಧನೆ ನಡೆಸಿ ಮೃತ ದೇಹಗಳನ್ನ ಹೊರತೆಗಿದ್ದಾರೆ. ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಶಿಗ್ಗಾಂವಿ ಠಾಣೆ ಪಿಎಸ್‍ಐ ಅನ್ನಪೂರ್ಣ ಹುಲಗೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ: ಪಿ.ಎಸ್ )

 

Leave a Reply

comments

Related Articles

error: