ಕರ್ನಾಟಕ

ನಕಲಿ ಖಾತೆ ಕ್ರಿಯೆಟ್ ಮಾಡಿದ ಭೂಪರಿಂದ ಅಮೆಜಾನ್ ಗೆ ಮೋಸ

ಚಿಕ್ಕಮಗಳೂರು,ಮಾ.12: ನಕಲಿ ಖಾತೆ ಸುಷ್ಟಿಸಿ ಅಮೆಜಾನ್ ಕಂಪನಿಗೆ ಒಂದು ಕೋಟಿಗೂ ಅಧಿಕ ವಂಚಿಸಿದ್ದ ನಾಲ್ವರು  ಆರೋಪಿಗಳನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.

ದರ್ಶನ್, ಪುನೀತ್, ಸಚಿನ್ ಶೆಟ್ಟಿ ಹಾಗೂ ಅನಿಲ್ ಬಂಧಿತ ಆರೋಪಿಗಳು. ಸಾರ್ವಜನಿಕರು ಅಮೆಜಾನ್‍ನಲ್ಲಿ ಬುಕ್ ಮಾಡಿದ ವಸ್ತು ಏಕದಂತ ಕೊರಿಯರ್ ಸರ್ವೀಸ್ ಸೆಂಟರ್ ಗೆ ಬರುತ್ತಿತ್ತು.  ಗ್ರಾಹಕರ ಮೊಬೈಲ್‍ಗೆ ಡೆಲವರಿ ಸೆಕ್ಸಸ್ ಫುಲ್ ಅಂತ ಮೆಸೇಜ್ ಬರುತ್ತೆ. ಆದರೆ ಗ್ರಾಹಕರು ಪಾವತಿಸೋ ಹಣ ಮಾತ್ರ ಹೋಗೋದು ಒಂದು ವರ್ಷದಿಂದ ಅಮೇಜಾನ್ ಕಂಪನಿಗೆ ಪಾವತಿಯಾಗುತ್ತಿರಲಿಲ್ಲ. ಒಂದು ಕೋಟಿ, ಮೂವತ್ತು ಲಕ್ಷ ರೂ. ಹಣವನ್ನು ಮೋಸ ಮಾಡಿದ್ದಾರೆ. ಹಣಕ್ಕೆ ಗ್ರಾಹಕರು ಡೆಬಿಟ್ ಕಾರ್ಡ್ ಬಳಸ್ತಾರೆ ಅಂತ ಗೊತ್ತಾದರೆ ಸಾಕು ತಮ್ಮ ಟ್ಯಾಬ್ ನಲ್ಲಿ ಸ್ವೈಪ್ ಮಾಡಿ ಹಣವನ್ನ ಅಕೌಂಟ್‍ಗೆ ಜಮಾ ಮಾಡಿಕೊಳ್ಳುತ್ತಿದ್ದರು. ಇತ್ತ ಗ್ರಾಹಕರಿಗೂ ಡೆಲವರಿ ಮೆಸೇಜ್ ಬರುತ್ತೆ. ಅತ್ತ ಕಂಪನಿಗೂ ಮೆಸೇಜ್ ತಲುಪುತ್ತಿತ್ತು. ಇವರೇ ಅಮೆಜಾನ್‍ನಲ್ಲಿ ನಕಲಿ ಖಾತೆ ಕ್ರಿಯೇಟ್ ಮಾಡಿ ತಾವೇ ಆರ್ಡರ್ ಮಾಡಿ ಬಳಿಕ ಕ್ಯಾನ್ಸಲ್ ಮಾಡಿ ವಸ್ತುವನ್ನ ಬೇರೆಯವರಿಗೆ ಮಾಡುವ ಮೂಲಕ ಕಂಪನಿಗೆ ಮೋಸಮಾಡುತ್ತಿದ್ದರೆಂದು ಹೇಳಲಾಗುತ್ತಿದೆ. (ವರದಿ: ಪಿ.ಎಸ್ )

Leave a Reply

comments

Related Articles

error: