ಮೈಸೂರು

ಸಂದೇಶ ಸ್ವಾಮಿ ಬಿಜೆಪಿ ಸೇರ್ಪಡೆಗೆ ಕಾರ್ಯಕರ್ತರ ಆಕ್ಷೇಪ

ಮೈಸೂರು,ಮಾ.12 : ಜೆಡಿಎಸ್ ನಿಂದ ಟಿಕೆಟ್ ವಂಚಿತರಾಗಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೆ ಮುಂದಾಗಿರುವ ಮಾಜಿ ಮೇಯರ್ ಸಂದೇಶ್ ಸ್ವಾಮಿ ನಿಲುವಿಗೆ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದಲ್ಲಿ ಅವಕಾಶ ಪಡೆದು ಜನತಾ ದಳದಲ್ಲಿ ಅಧಿಕಾರ ಅನುಭವಿಸಿ ಈಗ ಟಿಕೆಟ್ ಕೈ ತಪ್ಪಿದ ಏಕೈಕ ಕಾರಣಕ್ಕಾಗಿ ಬಿಜೆಪಿ ಪಕ್ಷಕ್ಕೆ ಸೇರಿ ಟಿಕೆಟ್ ಆಕಾಂಕ್ಷಿಯಾಗಿರುವ ಸಂದೇಶ್ ಸ್ವಾಮಿಯವರಿಗೆ ಪಕ್ಷದ ವರಿಷ್ಠರು ಮಣೆಹಾಕಬಾರದು, ತಮ್ಮ ವೈಯಕ್ತಿಕ ಹಿತಾಶಕ್ತಿಗಾಗಿ ಬಿಜೆಪಿ ಸೇರ್ಪಡೆಗೆ ಮುಂದಾಗಿರುವ ಅವರ ನಿಲುವಿಗೆ ಈ ಭಾಗದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ವಿರೋಧವಿದೆ ಎಂದು ಪಕ್ಷದ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂದೇಶ್ ಸ್ವಾಮಿಯವರು ಚುನಾವಣಾ ದೃಷ್ಠಿಯಿಂದ ಪಕ್ಷ ಸೇರ್ಪಡೆಯಾಗಲು ಮುಂದಾಗಿರುವುದು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿಗೆ ಜಿಜ್ಞಾಸೆ ಮೂಡಿಸುತ್ತಿದೆ ಹಾಗಾಗಿ ಪಕ್ಷದ ವರಿಷ್ಠರು ಯಾವುದೇ ಒತ್ತಡಕ್ಕೆ ಮಣಿಯದೆ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತರು ಸೂಚಿಸುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು. ಹಾಗೂ ಸಂದೇಶ್ ಸ್ವಾಮಿಯವರು ಪಕ್ಷಕ್ಕೆ ಬರುವ ಮುನ್ನ ಪಕ್ಷದ ನಿರ್ಧಾರಗಳಿಗೆ ಬದ್ಧರಿರುವುದಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: