ಮನರಂಜನೆ

`ಟಗರು’ ಸಿನಿಮಾ ನೋಡಿದ ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು,ಮಾ.12-ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ `ಟಗರು’ ಸಿನಿಮಾವನ್ನು ರಾಕಿಂಗ್ ಸ್ಟಾರ್ ಯಶ್ ನೋಡಿದ್ದು, ಸಿನಿಮಾ ಬಗ್ಗೆ ವಿಮರ್ಶೆ ಕೂಡ ಮಾಡಿದ್ದಾರೆ.

ಸಿನಿಮಾ ನೋಡಿದ ಯಶ್ ಮೊದಲಿಗೆ ಸೂರಿ ನಿರ್ದೇಶನದ ಬಗ್ಗೆ ಎಲ್ಲಿಯೂ ಬೇಸರವಾಗದಂತೆ ಚಿತ್ರಕತೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ. ಶಿವಣ್ಣನ ಅಭಿನಯ ತುಂಬಾ ಇಷ್ಟವಾಗುತ್ತೆ ಎಂದಿದ್ದಾರೆ. ಅಲ್ಲದೆ, ಧನಂಜಯ, ಗೆಳೆಯ ವಸಿಷ್ಠನ ಪಾತ್ರ ಹಾಗೂ ಅಭಿನಯವನ್ನು ಇಷ್ಟ ಪಟ್ಟಿದ್ದಾರೆ. ಕ್ಯಾಮೆರಾ ವರ್ಕ್, ಸಂಭಾಷಣೆ ಹಾಗೂ ಸಿನಿಮಾದ ಎಲ್ಲಾ ಪಾತ್ರಗಳ ಬಗ್ಗೆ ಮಾತನಾಡುವುದರ ಜೊತೆಗೆ ಟಗರು ಚಿತ್ರ ನೋಡುವಾಗ ತಲೆಗೆ ಕೆಲಸ ಹೆಚ್ಚಾಗುತ್ತೆ ಎಂದಿದ್ದಾರೆ. (ಎಂ.ಎನ್)

Leave a Reply

comments

Related Articles

error: