ಮೈಸೂರು

ದಲಿತರು ವಾಸ ಮಾಡುತ್ತಿರುವ ಸ್ಥಳದ ಅಕ್ರಮ ಮಾರಾಟ: ರೇವಣ್ಣ ಆರೋಪ

ದಲಿತರು ವಾಸ ಮಾಡುತ್ತಿರುವ ಸ್ಥಳಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ನಗರ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇವಣ್ಣ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಎಲೆತೋಟ ಜೆ.ಎಲ್.ಬಿ. ಮುಖ್ಯರಸ್ತೆ, ಸರ್ವೆ ನಂ.109,109/1 ರಲ್ಲಿ 19-02-1979 ರಲ್ಲಿ ಮಣಿಯಯ್ಯ ಬಿನ್ ಪುಟ್ಟಸ್ವಾಮಿ ಎಂಬುವರಿಗೆ 11 ಗುಂಟೆ ಜಮೀನು ಮಂಜೂರಾಗಿತ್ತು. 06-07-2006 ರಲ್ಲಿ ಡಿ.ವಿ.ಪುಟ್ಟಸ್ವಾಮಿ ಮತ್ತು ನೇತ್ರಾವತಿ ರಾಜೇಶ್ ರವರು ಸೇರಿ ಸರ್ಕಾರಕ್ಕೆ ಮರೆಮಾಚುವುದಕ್ಕಾಗಿ ಮಣಿಯಯ್ಯ ಎಂಬ ಹೆಸರಿನಲ್ಲಿ ಫೋರ್ಜರಿ ಮಾಡಿ ನಂತರ ಮನೆ ವಿಳಾಸವನ್ನು ಬದಲಾಯಿಸಿಕೊಂಡು ಮನೆ ನಂ 163 ಎಂ ಬ್ಲಾಕ್, ಆದಿಚುಂಚನಗಿರಿ ರಸ್ತೆ ಇಲ್ಲಿ ವಾಸವಾಗಿದ್ದಾರೆ ಎಂದು ಆರೋಪಿಸಿದರು.

ಅಲ್ಲದೇ, ರಾಜಕೀಯ ಬಲ ಬಳಸಿ ವಾಣಿಜ್ಯ ಕೈಗಾರಿಕಾ ಖಾತೆ ಮಾಡಿಸಿಕೊಂಡು ಪೆಟ್ರೋಲ್ ಬಂಕ್, ಹೊಯ್ಸಳ ಸರ್ವೀಸ್ ಸ್ಟೇಷನ್, ಗ್ಯಾಸ್ ಬಂಕ್ ಎಂಬ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ವಿಚಾರವಾಗಿ ಈಗಾಗಲೇ ಸರ್ಕಾರದ ಸಮಿತಿ ಕಂದಾಯ ಇಲಾಖೆ ಮತ್ತು ಎ.ಸಿ.ಬಿ ಕಂದಾಯ ಮಂತ್ರಿಗಳು ಮತ್ತು ಪೊಲೀಸ್ ಇಲಾಖೆಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಹೇಳಿದರು.

ಅರಣ್ಯ ಇಲಾಖೆಯ ಬಾಬು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: