ಮನರಂಜನೆ

ಹಿಮಾಲಯ ಪ್ರವಾಸದಲ್ಲಿ ರಜನಿಕಾಂತ್

ಚೆನ್ನೈ,ಮಾ.12-ನಟ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುತ್ತಿರುವ ಹಿನ್ನೆಲೆಯಲ್ಲಿ ಹಿಮಾಲಯಕ್ಕೆ ಭೇಟಿ ನೀಡಿರುವ ರಜನಿ ತಮ್ಮ ಗುರುಗಳನ್ನು ತಮ್ಮ ನಿರ್ಧಾರವನ್ನು ತಿಳಿಸಿ ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಆಗಾಗ ಹಿಮಾಲಯಕ್ಕೆ ಹೋಗಿ ಧ್ಯಾನ ಮಾಡಿ ಬರುತ್ತಾರೆ. ವಿಶೇಷವಾಗಿ ತಮ್ಮ ಸಿನಿಮಾಗಳು ಬಿಡುಗಡೆ ಆಗುವ ಮುಂಚೆ ಹಾಗೂ ತಮ್ಮ ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳುವ ಮುಂಚೆ ರಜನಿ ಹಿಮಾಲಯಕ್ಕೆ ಭೇಟಿ ಕೊಡುತ್ತಾರೆ.

ಚೆನೈ ನಿಂದ ಪ್ರವಾಸಕ್ಕೆ ಹೊರಡುವಾಗ ತಮ್ಮ ಉದ್ದೇಶ ತಿಳಿಸದ ರಜನಿಕಾಂತ್ ಎರಡು ವಾರಗಳ ಕಾಲ ಹಿಮಾಲಯದಲ್ಲಿ ಇರುವುದಾಗಿ ಹೇಳಿದ್ದಾರೆ. ಭಾರತೀಯ ಯೋಗ ಸತ್ಸಂಗ ಸೊಸೈಟಿಯ ಶತಮಾನೋತ್ಸ ಕಾರ್ಯಕ್ರಮದಲ್ಲಿ ರಜನಿ ಭಾಗಿ ಆಗಲಿದ್ದಾರೆ ಎನ್ನುವ ಸುದ್ದಿ ಇದೆ. (ಎಂ.ಎನ್)

Leave a Reply

comments

Related Articles

error: