ಮನರಂಜನೆ

2018ರ ‘ಬ್ಲಾಕ್ ಬಸ್ಟರ್’ ಚಿತ್ರವೆಂದು ಸಾಬೀತಾದ ‘ಪದ್ಮಾವತ್’

ದೇಶ(ಮುಂಬೈ)ಮಾ.12:- ಇತಿಹಾಸದ ಕುರಿತು ನಿರ್ಮಿತವಾಗಿದ್ದ, ಸಾಕಷ್ಟು ವಿವಾದ ಸೃಷ್ಟಿಸಿದ್ದ ಸಂಜಯ್ ಲೀಲಾ ಬನ್ಸಾಲಿಯವರ ವಿವಾದಾತ್ಮಕ ಚಿತ್ರ ‘ಪದ್ಮಾವತ್ ‘ ಈ ವರ್ಷದ ‘ಬ್ಲಾಕ್ ಬಸ್ಟರ್’ ಚಿತ್ರವೆಂದು ಸಾಬೀತಾಗಿದೆ.

ಚಿತ್ರ ಗಲ್ಲಾ ಪೆಟ್ಟಿಗೆಯನ್ನು ಧೂಳಿಪಟ ಮಾಡುವುದರೊಂದಿಗೆ ಎಲ್ಲ ಅಂಕಿಅಂಶಗಳ ದಾಖಲೆಯನ್ನೂ ಮುರಿದೆ. ಬಾಕ್ಸ್ ಆಫೀಸ್ ಇಂಡಿಯಾ ಡಾಟ್ ಕಾಂ ವರದಿಯ ಪ್ರಕಾರ ಆರನೇ ವಾರದಲ್ಲಿ ನಾಲ್ಕು ಕೋಟಿ ರೂ.ಗಳಿಸಿದೆ. ಚಿತ್ರದ ಒಟ್ಟು ಗಳಿಗೆ 279.84ಕೋ.ರೂ, ಇದರ ಜೊತೆಗೆ 2018ರ ಬ್ಲಾಕ್ ಬಸ್ಟರ್ ಚಿತ್ರ ಎಂಬುದಾಗಿಯೂ ಗುರುತಿಸಿಕೊಂಡಿದೆ.ಮುಂಬೈ, ಪಶ್ಚಿಮ ಬಂಗಾಳ, ದಕ್ಷಿಣ ಭಾರತಗಳಲ್ಲಿ ಹೆಚ್ಚು ಗಳಿಕೆ ಕಂಡಿದೆ. ಚಿತ್ರ 300ಕೋಟಿಯನ್ನು ದಾಟಲಿದೆಯೇ ಎಂಬ ಕುತೂಹಲವೀಗ ಮೂಡಿದೆ. ಬಾಲಿವುಡ್ ನ ಅನೇಕ ಖ್ಯಾತನಾಮರು ಚಿತ್ರವನ್ನು ಪ್ರಶಂಸಿಸಿದ್ದಾರೆ. ಕಲಾವಿದರ ಕ್ಷಾರ್ಯಕ್ಷಮತೆಯನ್ನೂ ಪ್ರಶಂಸಿಸಿದ್ದಾರೆ. ಚಿತ್ರ ಭವ್ಯವವಾದ ಸೆಟ್ ಮತ್ತು ಉತ್ತಮ ಸಂಗೀತಗಳ ಮೂಲಕ ಜನಪ್ರಿಯವಾಗಿದೆ ಎನ್ನಲಾಗುತ್ತಿದೆ. (ಎಸ್.ಎಚ್)

Leave a Reply

comments

Related Articles

error: