ಕರ್ನಾಟಕ

ಹಾಸನ ಜಿಲ್ಲಾ ಸೈನಿಕ ಮಂಡಳಿ ಸಭೆ

ಹಾಸನ (ಮಾ.12): ಮಾ.16 ರಂದು ಬೆಳಿಗ್ಗೆ ಸಮಯ 11 ಗಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಸನ ಜಿಲ್ಲಾ ಸೈನಿಕ ಮಂಡಳಿಯ ಸಭೆಯನ್ನು ಏರ್ಪಡಿಸಲಾಗಿದೆ.

ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆಲೆಸಿರುವ ಮಾಜಿ ಸೈನಿಕರು ಸದರಿ ಸಭೆಯಲ್ಲಿ ಚರ್ಚಿಸಲು ತಮ್ಮಿಂದೇನಾದರು ವಿಷಯಗಳಿದ್ದಲ್ಲಿ ಲಿಖಿತ ರೂಪದಲ್ಲಿ ಖುದ್ದಾಗಿ ಅಥವಾ ಅಂಚೆಯ ಮೂಲಕ ಮಾ.13 ರೊಳಗಾಗಿ ತಲುಪುವಂತೆ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶ್ರೀ ವಾಸವಿ ನಿಲಯ, ಶಂಕರೀಪುರಂ, 1ನೇ ಕ್ರಾಸ್, ಬಿ.ಎಂ.ರಸ್ತೆ, ಹಾಸನ ಇವರಿಗೆ ಸಲ್ಲಿಸಲು ಉಪ ನಿರ್ದೇಶಕರು (ಪ್ರಭಾರ), ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಹಾಸನ ಅವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: