ಕ್ರೀಡೆ

ಮೊದಲ ಏಕದಿನ ಪಂದ್ಯ : ಆಸ್ಟ್ರೇಲಿಯಾಕ್ಕೆ 201ರನ್ ಗಳ ಗುರಿ ನೀಡಿದ ಭಾರತ ಮಹಿಳಾ ಕ್ರಿಕೆಟ್ ತಂಡ

ವಡೋದರಾ,ಮಾ.12:- ಪೂಜಾ ವಸ್ತ್ರಕಾರ(51) ಮತ್ತು ಸುಷ್ಮಾ ವರ್ಮಾ(41)ರ ನಡುವಿನ ಎಂಟನೇ ವಿಕೆಟ್ ಗೆ 76ರನ್ ಗಳ ಪಾಲುದಾರಿಕೆಯ ಸಹಾಯದಿಂದ ಭಾರತದ ಮಹಿಳಾ ಕ್ರಿಕೆಟ್ ತಂಡ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ 201ರನ್ ಗಳ ಗುರಿ ನೀಡಿದೆ.

ಟಾಸ್ ಗೆಲ್ಲುವ ಮೂಲಕ ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡಿತು. ಆನಂತರ ಪೂಜಾ ಮತ್ತು ಸುಷ್ಮಾ ತಂಡವನ್ನು 200ರನ್ ಗಳ ವರೆಗೆ ಮುನ್ನಡೆಸಿದರು. 18ರ ಹರೆಯದ ಪೂಜಾ ಮೊದಲ ಅರ್ಧಶತಕ ವಿದಾಗಿದ್ದು, ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದರು. ಅದೇ ರೀತಿ ಸುಷ್ಮಾ 71ಎಸೆತಗಳನ್ನು ಎದುರಿಸಿ ಮೂರು ಬೌಂಡರಿ ಬಾರಿಸಿದರು. ಭಾರತ ಮೊದಲ 32 ಓವರ್ ಗಳಲ್ಲಿ 7ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತ್ತು. ಇದರ ನಂತರ ಸುಷ್ಮಾ ಮತ್ತು ಪೂಜಾ ತಂಡದ ರನ್ ಗಾಗಿ ಸಾಕಷ್ಟು ಹೆಣಗಾಡಿದ್ದರು. ಭಾರತ ತಂಡದ ನಿಧಾನಗತಿಯ ಆರಂಭದಲ್ಲಿ ಪೂನಮ್ ರಾವತ್(37), ಸ್ಮೃತಿ ಮಂಡಾನಾ(12) 9ಓವರ್ ಗಳಲ್ಲಿ 38ರನ್ ಗಳಿಸಿದ್ದರು. ಸ್ಮೃತಿ 10ನೇ ಓವರ್ ನ ಮೊದಲ ಎಸೆತಕ್ಕೆ ಎಲ್ ಬಿಡಬ್ಲ್ಯೂ ಔಟ್ ಅಗಿದ್ದರು. ಜೆಸ್ ಜೋನಾಸೆನ್ 30ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಅಮಾಂಡಾ ಮೂರು ವಿಕೆಟ್ ಪಡೆದರು. (ಎಸ್.ಎಚ್)

Leave a Reply

comments

Related Articles

error: