
ಮೈಸೂರು
ರೇಸ್ಕ್ಲಬ್ ಸ್ಥಳಾಂತರ ಬೇಡ, ಯಥಾ ಸ್ಥಿತಿಯಲ್ಲೇ ಇರಲಿ: ಸಿ.ಪಿ. ತಮ್ಮಣ್ಣ
ರೇಸ್ಕ್ಲಬ್ 125ನೇ ವರ್ಷಕ್ಕೆ ಕಾಲಿಟ್ಟು ಪಾರಂಪರಿಕ ಸಂಸ್ಥೆಯಾಗಿ ಹೆಸರು ಪಡೆದಿದೆ. ಆದ್ದರಿಂದ ರೇಸ್ಕ್ಲಬ್ ಸ್ಥಳಾಂತರ ಬೇಡ, ಯಥಾ ಸ್ಥಿತಿಯಲ್ಲೇ ಇರಲಿ ಎಂದು ಜನಮನರಂಗದ ಪದಾಧಿಕಾರಿಗಳ ಅಧ್ಯಕ್ಷ ಸಿ.ಪಿ. ತಮ್ಮಣ್ಣ ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತೀಯ ಟರ್ಫ್ ಪ್ರಾಧಿಕಾರವು ಮೈಸೂರು ರೇಸ್ಕ್ಲಬ್ಗೆ ಸ್ವತಂತ್ರ ಟರ್ಫ್ ಪ್ರಾಧಿಕಾರದ ಸ್ಥಾನ ನೀಡಿದ್ದಾರೆ. ರೇಸ್ ಕ್ಲಬ್ ರೇಸಿಂಗ್ ಚಟುವಟಿಕೆಯಲ್ಲದೆ ಬಡವರಿಗೆ ನೆರವಾಗಿವ ಉದ್ದೇಶದಿಂದ ಎಂ.ಆರ್.ಸಿ. ಕಣ್ಣಿನ ಆಸ್ಪತ್ರೆ ನಿರ್ಮಿಸಿ 10 ಲಕ್ಷ ಮಂದಿಗೆ ಕಣ್ಣಿನ ತಪಾಸಣೆಯನ್ನು ಉಚಿತವಾಗಿ ಮಾಡುತ್ತಿದೆ.
ಮಾಸಿಕವಾಗಿ ಸರಾಸರಿ 1.7 ಕೋಟಿ ರೂ. ಗಳಷ್ಟು ತೆರಿಗೆ ಮೂಲಕ ಸರ್ಕಾರಕ್ಕೆ ಪಾವತಿಸುತ್ತಿದೆ. ಅದೇ ರೀತಿ ಕೇಂದ್ರ ಸರ್ಕಾರಕ್ಕೂ 2014-15 ರಲ್ಲಿ ಆದಾಯತೆರಿಗೆ ಮತ್ತು ಸೇವಾ ತೆರಿಗೆ ಲೆಕ್ಕದಲ್ಲಿ 7 ಕೋಟಿ ರೂ. ಗಳಷ್ಟು ಹಣವನ್ನು ತಪ್ಪದೆ ಪಾವತಿಸಿದೆ. ರೇಸ್ಕ್ಲಬ್ ಚಾಮುಂಡಿಬೆಟ್ಟದ ತಪ್ಪಲಿನಲ್ಲಿದ್ದು ಹಸಿರು ವಲಯ ರಕ್ಷಿಸಿದೆ.
ಈಗಿರುವಾಗ ಈ ಸ್ಥಳವನ್ನು ಸ್ಥಳಾಂತರ ಮಾಡುವುದು ಬೇಡ. ಮುಖ್ಯಮಂತ್ರಿಗಳು ಈ ವಿಚಾರದ ಬಗ್ಗೆ ಗಮನಹರಿಸಿ ಯಥಾ ಸ್ಥಿತಿ ಕಾಯ್ದುಕೊಳ್ಳಬೇಕಾಗಿದೆ ಎಂದು ಮನವಿ ಮಾಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಪ್ರಕಾಶ್, ಸುಂದರ್ ಡಿಸೋಜ, ಎಸ್.ಚಂದ್ರಶೇಖರ್, ಸುಬ್ಬರಾವ್, ಮಹದೇವಪ್ಪ ಹಾಜರಿದ್ದರು.