ಮನರಂಜನೆ

ರಣವೀರ್ ಸಿಂಗ್ ಜೊತೆ ಕಣ್ ಸನ್ನೆ ಬೆಡಗಿ ಬಾಲಿವುಡ್ ಎಂಟ್ರಿ

ಮುಂಬೈ,ಮಾ.12: ಇತ್ತೀಚೆಗಷ್ಟೇ ಕಣ್ ಸನ್ನೆಯ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಬಾಲಿವುಡ್‍ಗೆ ಎಂಟ್ರಿಕೊಡಲಿದ್ದಾರೆ.

ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾ, ತನಗೆ ರಣವೀರ್ ಸಿಂಗ್, ಶಾರೂಖ್ ಖಾನ್ ಮತ್ತು ಸಿದ್ದಾರ್ಥ್ ಮಲ್ಹೊತ್ರ ಜೊತೆ ನಟಿಸುವ ಆಸೆಯನ್ನ ವ್ಯಕ್ತ ಪಡಿಸಿದ್ದಾರೆ.

ಮೂಲಗಳ ಪ್ರಕಾರ ಪ್ರಿಯಾ ಪ್ರಕಾಶ್ ವಾರಿಯರ್ ಬಾಲಿವುಡ್‍ನ `ಚೆನೈ ಎಕ್ಸೆಪ್ರೆಸ್’ ಖ್ಯಾತಿಯ ರೋಹಿತ್ ಶೆಟ್ಟಿ ನಿರ್ದೇಶನದ `ಸಿಂಬಾ’ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಮತ್ತೊಂದು ಸಿನಿಮಾದಲ್ಲಿ ಕೂಡ ನಟಿಸಲಿರುವ ಪ್ರಿಯಾ, ಕರಣ್ ಜೋಹಾರ್ ನಿರ್ಮಾಣದ `ಗೋಲ್‍ಮಾಲ್ ಅಗೈನ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಕಣ್ ಸನ್ನೆಯಿಂದ ಫೇಮಸ್ ಆದ   ಪ್ರಿಯಾ ಪ್ರಕಾಶ್ ಅವರು ನಟಿಸುತ್ತಿರುವ `ಒರು ಅಡಾರ್ ಲವ್’ ಮಲಯಾಳಂ ಸಿನಿಮಾವು ಜೂನ್ 14 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಹೇಳಿದೆ. (ವರದಿ: ಪಿ.ಎಸ್)

Leave a Reply

comments

Related Articles

error: