ಕರ್ನಾಟಕ

ಬಿಳ್ವಾಯಿ ಗೋಲ್ಡ್ ಯಂತ್ರ ಉದ್ಘಾಟನೆ

ರಾಜ್ಯ(ಮಡಿಕೇರಿ) ಮಾ.12 :-ಚಿನ್ನ, ಬೆಳ್ಳಿ, ಪ್ಲಾಟಿನಂ ಶುದ್ಧತೆಯನ್ನು ಪರೀಕ್ಷಿಸುವ ಎಕ್ಸ್.ಆರ್.ಎಫ್ ಯಂತ್ರ ಮತ್ತು ತುಂಡಾದ ಚಿನ್ನದ ಆಭರಣಗಳ ಹೊಳಪನ್ನು ಕಳೆದುಕೊಳ್ಳದಂತೆ ಜೋಡಣೆ ಮಾಡುವ ಲೇಸರ್ ವೆಲ್ಡಿಂಗ್ ಯಂತ್ರದ ಉದ್ಘಾಟನಾ ಸಮಾರಂಭವ ತಾ.14 ರಂದು ನಗರದ ಬಿಳ್ವಾಯಿ ಗೋಲ್ಡ್ ಮಳಿಗೆಯಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಳ್ವಾಯಿ ಗೋಲ್ಡ್‍ನ ಮಾಲೀಕರಾದ ಬಿ.ಸಿ. ಶ್ರೀಧರ ಆಚಾರ್ಯ ಕೊಡಗು ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಈ ವಿಶಿಷ್ಟ ಗುಣದ ಯಂತ್ರಗಳನ್ನು ಅಳವಡಿಸಲಾಗುತ್ತಿದೆ ಎಂದರು. ಥೈವಾನ್ ನಿಂದ ಎಕ್ಸ್.ಆರ್.ಎಫ್ ಯಂತ್ರ ಮತ್ತು ಜರ್ಮನಿಯಿಂದ ಲೇಸರ್ ವೆಲ್ಡಿಂಗ್ ಯಂತ್ರವನ್ನು ಖರೀದಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬೆಳಗ್ಗೆ 10.30 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಮಡಿಕೇರಿಯ ನಿವೃತ್ತ ನಾಯಬ್ ಸುಬೇದಾರ್ ಟಿ.ಕೆ. ಪುರುಷೋತ್ತಮ ಆಚಾರ್ಯ, ಸಿದ್ದಾಪುರದ ಪೈತಲ್ ಗೋಲ್ಡ್‍ನ ಮಾಲೀಕರು ಮತ್ತು ಚಿನ್ನ ಬೆಳ್ಳಿ ವರ್ತಕರು ಹಾಗೂ ಕೆಲಸಗಾರರ ಸಂಘದ ಅಧ್ಯಕ್ಷರಾದ ಕೆ.ಕೆ.ಶ್ರೀನಿವಾಸ ಆಚಾರ್ಯ ಭಾಗವಹಿಸಿಲಿದ್ದಾರೆ ಎಂದು ಬಿ.ಸಿ. ಶ್ರೀಧರ ಆಚಾರ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಹೋದರ ಬಿ.ಸಿ.ಅಶೋಕ್ ಹಾಗೂ ಪುತ್ರ ಆದೇಶ್ ಬಿಳ್ವಾಯಿ ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: