ಪ್ರಮುಖ ಸುದ್ದಿಮೈಸೂರು

ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮ

ರಾಜ್ಯದ ರಫ್ತು ವಲಯವನ್ನು ವಿಸ್ತರಿಸಿ ರಫ್ತು ಪ್ರಮಾನವನ್ನು ಹೆಚ್ಚಿಸುವ ಸಲುವಾಗಿ ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯೋದ್ಯಮಿಗಳು ಹಾಗೂ ಭಾವಿ ರಫ್ತುದಾರರಿಗೆ 6 ದಿನಗಳ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಜ.16ರಿಂದ 21ರ ವರೆಗೆ ದಿ ಇನ್‍ಸ್ಟಿಟ್ಯೂಟಷನ್ ಆಫ್ ಇಂಜಿನಿಯರ್ಸ್‍ನ ಎಸ್‍.ಪಿ. ಭಟ್‍ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಕಾರ್ಯಕ್ರಮವನ್ನು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೆಂದ್ರ, ಬೆಂಗಳೂರು; ಜಿಲ್ಲಾ ಕೈಗಾರಿಕಾ ಕೇಂದ್ರ ಮೈಸೂರು ಹಾಗೂ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮೈಸೂರು ಮತ್ತು ಮೈಸೂರು ಜಿಲ್ಲೆಯ ಕೈಗಾರಿಕಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.

ತರಬೇತಿ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ವ್ಯಾಪಾರಗಳು, ರಫ್ತು ವ್ಯವಹಾರಗಳಿಗೆ ಸಂಬಂಧಿಸಿದ ವಿದೇಶಿ ನೀತಿ ನಿಯಮಗಳು, ರಫ್ತು ಉತ್ಪನ್ನಗಳ ಮೌಲ್ಯ ಹಾಗೂ ಬೆಲೆ ನಿಗದಿಪಡಿಸುವುದು, ವಿವಿಧ ಕೈಗಾರಿಕಾ ಹಾಗೂ ಇತರ ಉತ್ಪನ್ನಗಳಿಗೆ ರಫ್ತು ವಲಯದಲ್ಲಿನ ಬೇಡಿಕೆ, ರಫ್ತು ನಿರ್ವಹಣೆ ಮತ್ತು ಮಾರುಕಟ್ಟೆ, ಕೇಂದ್ರ ಅಬಕಾರಿ ಮತ್ತು ಸುಂಕಗಳ ಕುರಿತ ನಿಯಮಾವಳಿಗಳು, ರಫ್ತು ಉತ್ತೇಜನಾ ಸಂಸ್ಥೆಗಳ ನೆರವು, ರಫ್ತು ಉತ್ಪನ್ನಗಳ ವಿಮೆ ಮತ್ತು ಕೆಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ರಫ್ತುದಾರರಿಗೆ ದೊರೆಯುವ ರಿಯಾಯಿತಿ ಮತ್ತು ಪ್ರೋತ್ಸಾಹಗಳು ಹಾಗೂ ಇತರೆ ರಫ್ತು ವ್ಯವಹಾರಗಳ ಬಗ್ಗೆ ಸಂಬಂಧಪಟ್ಟ ಇಲಾಖೆ/ಸಂಸ್ಥೆಗಳ ಅಧಿಕಾರಿಗಳು ತರಬೇತಿದಾರರಿಗೆ ಮಾಹಿತಿ ನೀಡುವರು.

ತರಬೇತಿ ಕಾರ್ಯಕ್ರಮಕ್ಕೆ ಹತ್ತು ಸಾವಿರ ರೂಪಾಯಿಗಳ ತರಬೇತಿ ವೆಚ್ಚ ನಿಗದಿಪಡಿಸಲಾಗಿದೆ. ಈ ಪೈಕಿ ಮಹಿಳೆಯರು, ಅಲ್ಪ ಸಂಖ್ಯಾತರು ಮತ್ತು ಪ.ಜಾತಿ/ಪ.ಪಂಗಡ ಹಾಗೂ ಅಂಗವಿಕಲರಿಗೆ ಶೇಕಡಾ 50ರಷ್ಟು ಮತ್ತು ವಿಟಿಪಿಸಿ ಸದಸ್ಯರಿಗೆ ಶೇ. 25 ರಷ್ಟು ರಿಯಾಯಿತಿ ಇರುತ್ತದೆ. ಈ ತರಬೇತಿ ಶುಲ್ಕದಲ್ಲಿ ತರಬೇತಿಯ ಬೋಧನಾ ಸಾಮಗ್ರಿಗಳು, ಉಪಾಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮತ್ತು ಒಂದು ದಿನದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಐಸಿಡಿಎಸ್‍, ವೈಟ್‍ಫೀಲ್ಡ್‍ಗಳಲ್ಲಿನ ಪ್ರಾತ್ಯಕ್ಷಿಕೆ ತರಬೇತಿ ವೆಚ್ಚಗಳನ್ನು ಸಹ ಒಳಗೊಂಡಿರುತ್ತದೆ.

ಆಸಕ್ತ ಉದ್ಯಮಿಗಳು ಮತ್ತು ವಾಣಿಜ್ಯದಾರರು ಹಾಗೂ ಭಾವಿ ರಫ್ತುದಾರರು ನಿಗದಿತ ನಮೂನೆಯಲ್ಲಿ ತಮ್ಮ ಹೆಸರು ಮತ್ತು ವಿಳಾಸದೊಡನೆ ಹತ್ತು ಸಾವಿರ ರೂಪಾಯಿ (ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ/ಪ. ಪಂಗಡ ಹಾಗೂ ಅಂಗವಿಕಲರು ಐದು ಸಾವಿರ ರೂ. ಹಾಗೂ ವಿಟಿಪಿಸಿ ಸದಸ್ಯರು 7500 ರೂ) ಗಳ ತರಬೇತಿ ಶುಲ್ಕವನ್ನು ವ್ಯವಸ್ಥಾಪಕ ನಿರ್ದೇಶಕರು, ವಿಟಿಪಿಸಿ ಬೆಂಗಳೂರು – ಇವರಿಗೆ ಸಂದಾಯವಾಗುವಮತೆ ಡಿಡಿ/ಚೆಕ್‍ ಮೂಲಕ ಪಾವತಿಸಿ ಜನವರಿ 5 ರ ಒಳಗಾಗಿ ಶಾಖಾ ವ್ಯವಸ್ಥಾಪಕರು, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಮೈಸೂರು ಶಾಖೆ, ಮೈಸೂರು ಇಲ್ಲಿ ಹೆಸರು ನೋಂದಾಯಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ ಶಾಖಾ ವ್ಯವಸ್ಥಾಪಕರು, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಮೈಸೂರು ಶಾಖೆ, ಮೈಸೂರು ಕಚೇರಿಯ ದೂರವಾಣಿ ಸಂಖ್ಯೆ: 0821-4253409, ಮೊ: 9731938421 ಅಥವಾ ಇ-ಮೇಲ್: [email protected] ಮೂಲಕ ಸಂಪರ್ಕಿಸಲು ಕೋರಲಾಗಿದೆ.

Leave a Reply

comments

Related Articles

error: