ಕ್ರೀಡೆಪ್ರಮುಖ ಸುದ್ದಿ

ಕಾಮನ್ ವೆಲ್ತ್ ಗೇಮ್ಸ್ ಗೆ ಭಾರತದ ಹಾಕಿ ತಂಡ ಪ್ರಕಟ

ನವದೆಹಲಿ,ಮಾ.13-ಆಸ್ಟ್ರೇಲಿಯಾದ ಗೋಲ್ಡ್ಕೋಸ್ಟ್ನಲ್ಲಿ ಏ.4 ರಿಂದ ಪ್ರಾರಂಭವಾಗಲಿರುವ ಕಾಮನ್ ವೆಲ್ತ್ ಗೇಮ್ಸ್ ಗೆ ಭಾರತೀಯ ಪುರುಷರ ಹಾಕಿ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ.

ಮಿಡ್ಫೀಲ್ಡರ್ ಮನ್ಪ್ರೀತ್ ಸಿಂಗ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದು, ಚಿಂಗ್ಲೆಸನಾ ಸಿಂಗ್ಗೆ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಸರ್ದಾರ್ ಸಿಂಗ್ ಫಿಟ್ನೆಸ್ ಇಲ್ಲದ ಕಾರಣ ಕಾಮನ್ ವೆಲ್ತ್ ಗೇಮ್ಸ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿಲ್ಲ. ಕಾಮನ್ ವೆಲ್ತ್ ಗೇಮ್ಸ್ ಆಸ್ಟ್ರೇಲಿಯಾದ ಗೋಲ್ಡ್ಕೋಸ್ಟ್ನಲ್ಲಿ ಏ.4 ರಿಂದ 15 ರವರೆಗೆ ನಡೆಯಲಿದೆ.

ಭಾರತ ಕಳೆದ ಎರಡು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ರನ್ನರ್ ಅಪ್ ಆಗಿದ್ದು, ಬಿ ಗುಂಪಿನಲ್ಲಿ ಪಾಕಿಸ್ತಾನ, ಇಂಗ್ಲೆಂಡ್, ಮಲೇಷ್ಯಾ ಹಾಗೂ ವೇಲ್ಸ್ತಂಡದೊಂದಿಗೆ ಸ್ಥಾನ ಪಡೆದಿದೆ. ಏ.7ರಂದು ಪಾಕಿಸ್ತಾನವನ್ನು ಎದುರಿಸುವ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದೆ.

ತಂಡ: ಶ್ರೀಜೇಶ್, ಸೂರಜ್ ಕರ್ಕೇರ (ಗೋಲ್ಕೀಪರ್ಗಳು), ರೂಪಿಂದರ್ ಪಾಲ್ ಸಿಂಗ್, ಹರ್ಮನ್ಪ್ರೀತ್ ಸಿಂಗ್, ವರುಣ್ ಕುಮಾರ್, ಕೊಥಜಿತ್ ಸಿಂಗ್, ಗುರಿಂದರ್ ಸಿಂಗ್, ಅಮಿತ್ ರೋಹಿದಾಸ್ (ಡಿಫೆಂಡರ್ಗಳು), ಮನ್ಪ್ರೀತ್ ಸಿಂಗ್ (ನಾಯಕ), ಚಿಂಗ್ಲೆಸನಾ ಸಿಂಗ್ (ಉಪನಾಯಕ), ಸುಮಿತ್, ವಿವೇಕ್ ಸಾಗರ್ ಪ್ರಸಾದ್ (ಮಿಡ್ ಫೀಲ್ಡರ್ಗಳು), ಆಕಾಶ್ ದೀಪ್ ಸಿಂಗ್, ಎಸ್.ವಿ.ಸುನೀಲ್, ಲಲಿತ್ ಕುಮಾರ್ ಉಪಾಧ್ಯಾಯ, ದಿಲ್ಪ್ರೀತ್ ಸಿಂಗ್ (ಫಾರ್ವಡ್ಗಳು). (ಎಂ.ಎನ್)

Leave a Reply

comments

Related Articles

error: