ಕ್ರೀಡೆಪ್ರಮುಖ ಸುದ್ದಿ

ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್: ಪದಕ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ; ಸೆಹ್ವಾಗ್ ಅಭಿನಂದನೆ

ಮೆಕ್ಸಿಕೊ,ಮಾ.13-ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್‌ಎಸ್‌ಎಫ್) ವಿಶ್ವಕಪ್ ನಲ್ಲಿ ಭಾರತದ ಶೂಟರ್ ಗಳು ಮಾಡಿರುವ ಸಾಧನೆಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಭಿನಂದನೆ ಸಲ್ಲಿಸಿದ್ದಾರೆ.

ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ವಿಶ್ವಕಪ್ ನಲ್ಲಿ ಭಾರತ 4 ಚಿನ್ನ, 1 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ತನ್ನಾದಾಗಿಸಿಕೊಂಡಿದೆ.

ಟೂರ್ನಿಯ ಅಂತಿಮ ದಿನದಂದು ಪುರುಷರ ಸ್ಕೀಟ್ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಮೂವರು ಶೂಟರ್ ಗಳು ಕಣದಲ್ಲಿದ್ದರೂ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಟೂರ್ನಿಯಲ್ಲಿ ಭಾರತ ಪರ ಶಾಹಜರ್ ರಿಜ್ವಿ, ಮನು ಭಾಕರ್, ಅಖಿಲ್ ಶೆರೋನ್ ಹಾಗೂ ಓಂ ಪ್ರಕಾಶ್ ಚಿನ್ನ ಗೆದ್ದರೆ, ಅಂಜುಮ್ ಮೌದ್ಗಿಲ್ ಬೆಳ್ಳಿ, ಜಿತು ರೈ, ರವಿಕುಮಾರ್, ಮೆಹುಲಿ ಘೋಷ್ ಕಂಚು ಗೆದ್ದಿದ್ದಾರೆ.

ಟೂರ್ನಿಯಲ್ಲಿ ಮೊದಲಿಗೆ ರವಿ ಕುಮಾರ್ (ಪುರುಷರ 10 ಮೀ. ಏರ್ ರೈಫಲ್) ಕಂಚು ಜಯಿಸುವುದರೊಂದಿಗೆ ಭಾರತದ ಪದಕದ ಖಾತೆ ತೆರೆದಿದ್ದರು. ಇನ್ನೂ ಶಹಝಾರ್ ರಿಝ್ವಿ ಹಾಗೂ ಜಿತು ರೈ, ಮನು ಭಾಕರ್ ಚಿನ್ನದ ಪದಕ ಗೆದ್ದಿದ್ದಾರೆ. (ಎಂ.ಎನ್)

Leave a Reply

comments

Related Articles

error: