ಮನರಂಜನೆ

ಆಕಾಶದಲ್ಲಿ ಹಕ್ಕಿಯಂತೆ ಹಾರಿದ ಶುಭಾಪೂಂಜಾ

ಕಾರವಾರ,ಮಾ.13: ಮೊಗ್ಗಿನ ಮನಸ್ಸಿನ ಹುಡುಗಿ ಶುಭಾಪೂಂಜಾ ಪ್ಯಾರಾ ಮೋಟಾರ್ ನಲ್ಲಿ 500 ರಿಂದ ಸಾವಿರ ಅಡಿ ಎತ್ತರಕ್ಕೆ ಜಿಗಿದು ಸೆಲ್ಫಿ ವೀಡಿಯೋ ಮಾಡಿದ್ದಾರೆ.

ಬೆಂಗಳೂರಿನ ಟ್ರಾಫಿಕ್ ನಡುವೆ ಸಿಕ್ಕು, ಯಾಕ್ಷನ್ ಕಟ್ ಎಂದು ಬ್ಯುಸಿಯಾಗಿರುವ ನಟಿ ಶುಭಾಪೂಂಜಾ ಇಂದು ಕಾರವಾರದ ಕಡಲತೀರಕ್ಕೆ ಆಗಮಿಸಿ ಸಮುದ್ರ ತೀರದ ಪ್ಯಾರಾಮೋಟರ್ ನಲ್ಲಿ ಕುಳಿತು ಸುಮಾರು ಹತ್ತು ನಿಮಿಷಗಳ ಕಾಲ ಆಕಾಶದಲ್ಲಿ ತೇಲಿ ಹಕ್ಕಿಯಂತೆ ಹಾರಾಡಿ ಸೆಲ್ಫಿ ವೀಡಿಯೋ ತೆಗೆದು ಎಂಜಾಯ್ ಮಾಡಿದ್ದಾರೆ.

ಮೇಲಿನಿಂದ ಸುಂದರ ಪರಿಸರವನ್ನು ನೋಡುವುದು ತುಂಬಾ ಥ್ರಿಲ್ ಆಗಿರುತ್ತೆ. ಕಾರವಾರದ ಸಮುದ್ರ ನೀಲಿ ಆಕಾರದಲ್ಲಿ ಕಾಣುತಿತ್ತು, ಎರಡು ಕಿಲೋಮೀಟರ್ ಹೆಚ್ಚು ದೂರ ಕ್ರಮಿಸಿ ತುಂಬಾ ಎಂಜಾಯ್ ಮಾಡಿದ್ದೇನೆ ಎಂದು ತಿಳಿಸಿದರು. (ವರದಿ; ಪಿ.ಎಸ್ )

Leave a Reply

comments

Related Articles

error: