ಕ್ರೀಡೆ

ವಿರಾಟ್ ಕೊಯ್ಲಿಗೆ ಪ್ರಪೋಸ್ ಮಾಡಿದ ಕ್ರಿಕೆಟ್ ಆಟಗಾರ್ತಿ..!

ದೇಶ(ನವದೆಹಲಿ)ಮಾ.13:- ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ಆಟಗಾರ್ತಿಯೋರ್ವರು ಭಾರತೀಯ ಕ್ರಿಕೆಟ್ ತಂಡದ ನಾಯಕನನ್ನು ಮದುವೆಯಾಗುವಂತೆ ಪ್ರಪೋಸ್ ಮಾಡಿದ್ದರಂತೆ..!

ಕ್ರಿಕೆಟರ್ ಡೆನಿಯಲ್ ವೆಟ್ ಮತ್ತೆ ಸುದ್ದಿಯಲ್ಲಿದ್ದಾರೆ. ತ್ರಿಕೋನ ಸರಣಿಗಾಗಿ ಭಾರತಕ್ಕೆ ಆಗಮಿಸುತ್ತಿದ್ದು, ವಿರಾಟ್ ಕೊಯ್ಲಿ ತನಗೆ ಪ್ರೀತಿಯಿಂದ ನೀಡಿದ ಬ್ಯಾಟ್ ತಂದು ಆಡಲಿದ್ದಾಳಂತೆ. ಈ ಕುರಿತು ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಡೆನಿಯಲ್ ವೆಟ್ ‘ನಾನು ವಿವಾಹವಾಗುವಂತೆ ವಿರಾಟ್ ಕೊಯ್ಲಿ ಬಳಿ ಪ್ರಸ್ತಾಪಿಸಿದ್ದೆ. ಆದರೆ ಅವರು ನನಗೆ ಬ್ಯಾಟ್ ನೀಡಿದರು. ಇದೀಗ ನಾನು ಅವರು ನೀಡಿದ ಬ್ಯಾಟ್ ನಿಂದಲೇ ಅವರ ದೇಶದಲ್ಲಿ ಆಡಲಿದ್ದೇನೆ’ ಎಂದಿದ್ದಾರಂತೆ. ಡೆನಿಯಲ್ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ತ್ರಿಕೋನ ಸರಣಿಯಲ್ಲಿ ಭಾಗವಹಿಸಲಿದ್ದಾರೆ. ಮಾರ್ಚ್ 23ರಂದು ಮುಂಬೈನ ಬ್ರಾಬೌರ್ನ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡ ಆಡಲಿದ್ದು,ಬಳಿಕ ಮಾರ್ಚ್ 25ರಂದು ಇಂಗ್ಲೆಂಡ್ ತಂಡದ ಭಾರತ ತಂಡವನ್ನು ಎದುರಿಸಬೇಕಿದೆ. ಡೇನಿಯಲ್ ವೇಟ್ ವಿರಾಟ್ ಕೊಯ್ಲಿಯ ದೊಡ್ಡ ಅಭಿಮಾನಿಯಾಗಿದ್ದು, 2014ರಲ್ಲಿ ವಿರಾಟ್ ಕೊಯ್ಲಿ ಡೆನಿಯಲ್ ವೆಟ್ ರನ್ನು ಇಂಗ್ಲೆಂಡ್ ಪ್ರವಾಸದ ವೇಳೆ ಭೇಟಿಯಾಗಿದ್ದರು. ಟಿ.20 ವಿಶ್ವಕಪ್ ನಲ್ಲಿ ಸೌತ್ ಆಫ್ರಿಕಾ ವಿರುದ್ಧ 72ರನ್ ಪಡೆದ ವಿರಾಟ್ ಕೊಯ್ಲಿಯಿಂದ ಡೆನಿಯಲ್ ಎಷ್ಟು ಪ್ರಭಾವಿತರಾದರೆಂದರೆ ಮದುವೆಯ ಪ್ರಸ್ತಾಪವನ್ನು ಕೂಡ ಇರಿಸಿದರಂತೆ. ಡೆನಿಯಲ್ ವೆಟ್ ವಿರಾಟ್ ಕೊಯ್ಲಿ ತನಗೆ ನೀಡಿದ ಬ್ಯಾಟ್ ಗೆ ‘ಬೀಸ್ಟ್’ ಎಂದು ಹೆಸರಿಟ್ಟಿದ್ದಾರಂತೆ. ಟ್ವೀಟರ್ ನಲ್ಲಿಯೇ ಕೊಯ್ಲಿಗೆ ವಿವಾಹ ಪ್ರಸ್ತಾಪ ಕಳುಹಿಸಿದ್ದೆ. ಹತ್ತು ನಿಮಿಷಗಳ ಬಳಿಕ ಸಾವಿರಕ್ಕಿಂತಲೂ ಅಧಿಕ ರೀಟ್ವೀಟ್ ಗಳು ಬಂದಿದ್ದವು. ಬಳಿಕ ನನ್ನ ತಂದೆ ಈ ರೀತಿಯ ವಿಷಯಗಳನ್ನು ಟ್ವೀಟರ್ ನಲ್ಲಿ ಹಾಕಬಾರದೆಂದು ಸಲಹೆ ನೀಡಿದ್ದರು. ಅದಕ್ಕಾಗಿ ನಾನು ಅವರಲ್ಲಿ ಕ್ಷಮೆಯಾಚಿಸಿದ್ದೆ ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: