ದೇಶಪ್ರಮುಖ ಸುದ್ದಿ

ನಕ್ಸಲರ ದಾಳಿಗೆ 8 ಸಿಆರ್ ಪಿಎಫ್ ಯೋಧರ ಸಾವು

ನವದೆಹಲಿ,ಮಾ.13-ನಕ್ಸಲರು ನಡೆಸಿದ ದಾಳಿಗೆ 8 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿರುವ ಘಟನೆ ಛತ್ತೀಸ್ಗಢದ ಬಸ್ತರ್ ವಲಯದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ.

ಸಿಆರ್ ಪಿಎಫ್ ಯೋಧರು ಸ್ಫೋಟಕ ಸಂರಕ್ಷಣಾ ವಾಹನ (ಎಂಪಿವಿ) ದಲ್ಲಿ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ನಕ್ಸಲರು 212 ಬೆಟಾಲಿಯನ್ನ ಸಿಆರ್ ಪಿಎಫ್ ಯೋಧರ ಮೇಲೆ ಭಾರೀ ಸ್ಫೋಟಕಗಳನ್ನು ಎಸೆದಿದ್ದಾರೆ. ದಾಳಿಯಲ್ಲಿ 8 ಮಂದಿ ಯೋಧರು ಸಾವನ್ನಪ್ಪಿದ್ದು, ನಾಲ್ವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಭದ್ರತಾ ಪಡೆಗಳು ರಾಜ್ಯದಲ್ಲಿ 10 ನಕ್ಸಲರನ್ನು ಕೊಂದು ಹಾಕಿದ 11 ದಿನಗಳ ಬಳಿಕ ಘಟನೆ ನಡೆದಿದೆ. ಕಳೆದ 2 ವರ್ಷಗಳಲ್ಲಿ ಛತ್ತೀಸ್ಗಢದಲ್ಲಿ ಭದ್ರತಾ ಪಡೆಗಳು ನಡೆಸಿರುವ ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ ಸುಮಾರು 300 ನಕ್ಸಲರನ್ನ್ನು ಹತ್ಯೆ ಮಾಡಲಾಗಿದೆ. (ಎಂ.ಎನ್)

 

Leave a Reply

comments

Related Articles

error: