ದೇಶ

ಅಪಘಾತ ಪ್ರಕರಣ : ಗಾಯಕ ಉದಿತ್ ನಾರಾಯಣ್ ಪುತ್ರನ ಬಂಧನ; ಬಿಡುಗಡೆ

ದೇಶ(ಮುಂಬೈ)ಮಾ.13:- ಮುಂಬೈನ್ ಅಂಧೇರಿಯಲ್ಲಿ ಪ್ರಸಿದ್ಧ ಗಾಯಕ ಉದಿತ್ ನಾರಾಯಣ್ ಪುತ್ರ ಆದಿತ್ಯ ನಾರಾಯಣ್ ನ್ನು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ ಬಿಡುಗಡೆಗೊಳಿಸಲಾಗಿದೆ.

ಆಟೋರಿಕ್ಷಾವೊಂದಕ್ಕೆ  ಕಾರಿನಿಂದ ಡಿಕ್ಕಿ ಹೊಡೆದ ಎನ್ನುವ ಕಾರಣಕ್ಕೆ ಬಂಧಿಸಲಾಗಿತ್ತು. ಆದರೆ ಜಾಮೀನು ಸಿಕ್ಕ ಕಾರಣ ಬಿಡುಗಡೆ ಮಾಡಲಾಗಿದೆ. ಮರ್ಸಿಡಿಸ್ ಬೆಂಜ್ ಕಾರಿನ್ನು ಆದಿತ್ಯ (30)ಚಲಾಯಿಸಿಕೊಂಡು ಹೋಗುತ್ತಿದ್ದಾಗ ಆಟೋರಿಕ್ಷಾವೊಂದಕ್ಕೆ ಗುದ್ದಿದ್ದು, ಇದರಿಂದ ಇಬ್ಬರು ಗಾಯಗೊಂಡಿದ್ದರು. ಬಳಿಕ ಆಟೋರಿಕ್ಷಾ ಚಾಲಕ ರಾಜಕುಮಾರ್ ಪಲೇಕರ್, ಪ್ರಯಾಣಿಕರಾದ ಸುರೇಖಾ ಶಿವೇಕರ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿತ್ಯನನ್ನು ಬಂಧಿಸಲಾಗಿತ್ತು. ಬಳಿಕ ಬಿಡುಗಡೆಗೊಳಿಸಲಾಗಿದೆ. ಗಾಯಾಳು ಮಹಿಳೆ ಆದಿತ್ಯನ ವಿರುದ್ಧ ದೂರು ನೀಡಿದ್ದರು. ಅದಕ್ಕಾಗಿ ಪೊಲೀಸರು 279 ಮತ್ತು 338ರಡಿ ಪ್ರಕರಣ ದಾಖಲಿಸಿಕೊಂಡು ಆದಿತ್ಯನನ್ನು ಬಂಧಿಸಿದ್ದರು. ಬಳಿಕ ಬಿಡುಗಡೆಗೊಳಿಸಲಾಗಿದೆ ಎಂದು ಠಾಣಾಧಿಕಾರಿಗಳು ತಿಳಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.  (ಎಸ್.ಎಚ್)

Leave a Reply

comments

Related Articles

error: