ಮೈಸೂರು

ಎರಡು ದಿನಗಳ `ಪ್ರಾಚೀನ ಮತ್ತು ಮಧ್ಯಕಾಲೀನ ಕರ್ನಾಟಕ ಇತಿಹಾಸ’ ವಿಚಾರ ಸಂಕಿರಣಕ್ಕೆ ಚಾಲನೆ

ಮೈಸೂರು,ಮಾ.13-ನಮ್ಮ ರಾಜ್ಯವನ್ನಾಳಿದ ಅನೇಕ ಮಹನೀಯರು ತಾವು ಬಿಟ್ಟು ಹೋಗಿರುವ ಇತಿಹಾಸದ ಕುರುಹುಗಳು, ಆಡಳಿತ ಮಾರ್ಗಗಳು, ನಾಗರಿಕತೆ ಇಂದಿಗೂ ಸಾರ್ವಜನಿಕರ ಜೀವನ ಶೈಲಿ ಮೇಲೆ ಪ್ರಭಾವ ಬೀರುತ್ತಿದೆ ಎಂದು ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ಸಿ.ಬಸವರಾಜು ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ಇತಿಹಾಸ ಅಧ್ಯಯನ ವಿಭಾಗದ ವತಿಯಿಂದ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ `ಪ್ರಾಚೀನ ಮತ್ತು ಮಧ್ಯಕಾಲೀನ ಕರ್ನಾಟಕ ಇತಿಹಾಸ’ ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಇತಿಹಾಸ ತಿಳಿದವರು ಮಾತ್ರ ಇತಿಹಾಸವನ್ನು ಬರೆಯಲು ಸಾಧ್ಯ. ಹೀಗಾಗಿ ಜನರು ಇತಿಹಾಸ ತಿಳಿಯುವುದಕ್ಕೆ ಹೆಚ್ಚು ಮಹತ್ವ ನೀಡಬೇಕು. ಹಿಂದಿನ ಅಭಿವೃದ್ಧಿಶೀಲ ಕಾರ್ಯಗಳು ಹಾಗೂ ಇತಿಹಾಸದ ಘಟನೆಗಳನ್ನು ಗುರುತಿಸುವತ್ತ ಹೆಚ್ಚು ಸಂಶೋಧನೆಗಳಾಗಬೇಕು. ಸಂಶೋಧನೆಗಳ ಮೂಲಕ ಮಾಹಿತಿ ನೀಡುವುದರ ಜತೆಗೆ ನಾಗರೀಕತೆಯ ವಿಧಾನಗಳನ್ನು ಸಹ ಅವರಿಗೆ ಅರ್ಥೈಸಬೇಕಾಗಿದೆ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಶ್ರೇಷ್ಠ ಸಂಭಾವ್ಯ ಪ್ರೊ.ಜಿ.ಹೇಮಂತ್‍ಕುಮಾರ್, ಕುವೆಂಪು ವಿವಿಯ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ.ರಾಜಾರಾಮ್ ಹೆಗ್ಡೆ, ಮೈಸೂರು ವಿವಿ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ವೈ.ಎಚ್.ನಾಯಕ್‍ವಾಡಿ ಇತರರು ಉಪಸ್ಥಿತರಿದ್ದರು. (ವರದಿ-ಎಂ.ಎನ್)

Leave a Reply

comments

Related Articles

error: