ದೇಶಪ್ರಮುಖ ಸುದ್ದಿ

2025ರವೇಳೆ ಭಾರತ ಕ್ಷಯಮುಕ್ತವಾಗಿಸುವ ಗುರಿ ಹೊಂದಿದ್ದೇವೆ : ಪ್ರಧಾನಿ ನರೇಂದ್ರ ಮೋದಿ

ದೇಶ(ನವದೆಹಲಿ)ಮಾ.13:- 2030ರ ವೇಳೆಗೆ ವಿಶ್ವವನ್ನೇ ಕ್ಷಯರೋಗ ಮುಕ್ತ ಮಾಡುವ ಗುರಿ ಹೊಂದಲಾಗಿದ್ದು, 2025ರವೇಳೆ ಭಾರತವನ್ನು ಕ್ಷಯಮುಕ್ತವಾಗಿಸುವ ಗುರಿ ಹೊಂದಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

2025ರವೇಳೆಗೆ ಭಾರತವನ್ನು ಕ್ಷಯಮುಕ್ತವನ್ನಾಗಿಸುವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಐದು ವರ್ಷಗಳ ಹಿಂದೆಯೇ ಕ್ಷಯರೋಗಮುಕ್ತ ಮಾಡಲು ನಿರ್ಧರಿಸಿದ್ದೆವು. 2025ರವೇಳೆಗೆ ಸಂಪೂರ್ಣ ಕ್ಷಯಮುಕ್ತವಾಗಿಸುವ ಗುರಿ ಹೊಂದಿದ್ದೇವೆ. ಕ್ಷಯ ನಿರ್ಮೂಲನೆಗೆ ರಾಜ್ಯ ಸರ್ಕಾರಗಳ ಪಾತ್ರ ಮಹತ್ವದ್ದಾಗಿದೆ. ನಾನು ಎಲ್ಲ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದು, ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ತಿಳಿಸಿದ್ದೇನೆ ಎಂದು ಹೇಳಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಕ್ಷಯರೋಗ ನಿರ್ಮೂಲನೆಗಾಗಿ ರಾಷ್ಟ್ರೀಯ ಸ್ಟ್ರಾಟಿಜಿಕ್ ಯೋಜನೆಗೆ 12ಸಾವಿರ ಕೋ.ರೂ.ಮೊತ್ತವನ್ನು ನಿಗದಿಪಡಸಲಾಗಿದ್ದು, ರೋಗಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದು, ರೋಗ ಪತ್ತೆ ಹಚ್ಚುವಿಕೆ ಈ ಕಾರ್ಯತಂತ್ರದ ಮುಖ್ಯ ಉದ್ದೇಶವಾಗಿದೆ.  (ಎಸ್.ಎಚ್)

Leave a Reply

comments

Related Articles

error: