ಮೈಸೂರು

ಸಮತೆಂತೊ 50ರ ಸಂಭ್ರಮದ ಸಮಾರೋಪ ಮಾ.15.

ಮೈಸೂರು,ಮಾ.13 : ಸಾಂಸ್ಕೃತಿಕ ತಂಡ ಸಮತೆಂತೊ 50ರ ಸಂಭ್ರಮದ ಸಮಾರೋಪ ಸಮಾರಂಭವನ್ನು ಮಾ.15 ರಿಂದ 17ರವರೆಗೆ ಮೂರು ದಿನಗಳ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಆಯೋಜಿಸಿದೆ.

ಪ್ರತಿದಿನ ಸಂಜೆ 6.30ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಾಟಕ ಪ್ರದರ್ಶನ ನಡೆಯುವುದು.  ಮಾ.15ರ ವೈ.ಎಂ.ಪುಟ್ಟಣ್ಣಯ್ಯ ಮತ್ತು ತಂಡದವರಿಂದ ರಂಗಗೀತೆಗಳು, ರಾಮೇಶ್ವರಿ ವರ್ಮ ನಿರ್ದೇಶನದ ಚಂದ್ರಶೇಖರ ಪಾಟೀಲರ ಟಿಂಗರ ಬುಡ್ಡಣ್ಣ ನಾಟಕ ಪ್ರದರ್ಶನ.

ಮಾ.16. ಎಸ್.ರಾಮನಾಥ್ ಅವರ ಕಾರ್ಬನ್ ಕೇಕ್  ನಾಟಕವನ್ನು ಬೆಂಗಳೂರಿನ ಲಕ್ಷ್ಮೀ ಚಂದ್ರಶೇಖರ್ ಕ್ರಿಯೇಟಿವ್ ತಂಡ ಪ್ರದರ್ಶಿಸುವುದು. ನಿರ್ದೇಶನ ಪ್ರಮೋದ್ ಶಿಗ್ಗಾಂವ್.

ಮಾ.17, ಬೆಳಗ್ಗೆ 11ಕ್ಕೆ ನೇಪಥ್ಯ ಸನ್ಮಾನ ಗುರುರಾಜ್ ಮತ್ತು ರತ್ನ ಗುರುರಾಜ್ ದಂಪತಿಗಳಿಗೆ, ಮಹಾಲಿಂಗ, ಮಂಜುನಾಥ್, ಆಟೋ ವಿಶ್ವನಾಥ್, ಗೀತಾಂಜಲಿ ಆಚಾರ್ ಅವರುಗಳನ್ನು ಸನ್ಮಾನಿಸಿ ಪುರಸ್ಕರಿಸಲಾಗುವುದು.

ನಂತರ ಸಂಜೆ ಎಚ್.ಎಸ್.ಉಮೇಶ್ ನಿರ್ದೇಶನದ ಮೆತರ್ ಲಿಂಕ್ ಅವರ ‘ದಿ ಬ್ಲೈಂಡ್ಸ್’ ನಾಟಕ ಪ್ರದರ್ಶನವಿದೆ. ಮಾಹಿತಿಗಾಗಿ ಮೊ.ನಂ. 8088886388, 95904 03087, 74831 36251 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: