ಮೈಸೂರು

ಮಾ.16-17ರಂದು ಜೆಸಿ ಕಾಲೇಜಿನಲ್ಲಿ ತಾಂತ್ರಿಕ ಕಾರ್ಯಾಗಾರ

ಮೈಸೂರು,ಮಾ.13 : ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಹಾವಿದ್ಯಾಪೀಠದ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ವಿಭಾಗದಿಂದ ಇಂಟರ್ ನೆಟ್ ಡಿಸೈನ್ ಎವಲ್ಯೂಷನ್ ಪ್ರಮ್ ಡಾಟಾ ಟು ಮಲ್ಟಿಮೀಡಿಯಾ ಅಪ್ಲಿಕೇಷನ್ ವಿಷಯವಾಗಿ ಮಾ.16 ಮತ್ತು 17ರಂದು ಕಾರ್ಯಾಗಾರವನ್ನು ಆಯೋಜಿಸಿದೆ.

ಅಮೆರಿಕಾದ ಡಿಜಿಟಲ್ ಕಂಪ್ರೆಷನ್ ಟೆಕ್ನಾಲಜಿ ಕಾರ್ಪೋರೇಷನ್ ಮುಖ್ಯ ತಾಂತ್ರಿಕ ಅಧಿಕಾರಿ ಡಾ.ದಾದೆಸುಗೂರು ಆರ್ ವಾಮನ್ ಮುಖ್ಯ ಅತಿಥಿಯಾಗಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಎನ್.ನಾಗಭೂಷಣ್ ಅಧ್ಯಕ್ಷತೆ ವಹಿಸುವರು. ಟೆಕ್ವಿಪ್ ಯೋಜನೆ ಸಂಚಾಲಕ ಡಾ.ಬಿ.ಮನೋಜ್ ಕುಮಾರ್ ಉಪಸ್ಥಿತರಿರುವರು.

ವಿಭಾಗದ ಮುಖ್ಯಸ್ಥ ಡಾ.ಶಂಕರಯ್ಯ ಕಾರ್ಯಕ್ರಮದ ಸಂಘಟಕರಾಗಿದ್ದಾರೆ. ಪ್ರಾಧ್ಯಾಪಕರಾದ ಡಾ.ಟಿ.ಶ್ರೀಕಾಂತ್ , ಪ್ರೊ.ಎನ್.ಶಿವಪ್ರಸಾದ್ ಸಂಚಾಲರಾಗಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: