ಸುದ್ದಿ ಸಂಕ್ಷಿಪ್ತ

‘ನಾಡು ಕಟ್ಟಿದ ನಾಲ್ವಡಿಗೆ ನಮನ’ ಸ್ಮರಣ ಸಂಚಿಕೆ ನಾಳೆ ಬಿಡುಗಡೆ

ಮೈಸೂರು,ಮಾ.13 : ಕರ್ನಾಟಕ ಸೇನಾ ಪಡೆಯು ಶ್ರೀಕೃಷ್ಣರಾಜ ಒಡೆಯರ್ ಅವರ ‘ ನಾಡು ಕಟ್ಟಿದ ನಾಲ್ವಡಿಗೆ ನಮನ’ ಸ್ಮರಣ ಸಂಚಿಕೆಯನ್ನು ಮಾ.14ರ ಬೆಳಗ್ಗೆ 11.30ಕ್ಕೆ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಬಿಡುಗಡೆಗೊಳಿಸಲಾಗುವುದು.

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸುವರು, ಕಾಂಗ್ರೆಸ್ ನ ಡಾ.ಯತೀಂದ್ರ ಸಿದ್ದರಾಮಯ್ಯ, ಮೇಯರ್ ಬಿ.ಭಾಗ್ಯವತಿ, ಜಿ.ಪಂ.ಅಧ್ಯಕ್ಷೆ ನಯಿಮಾ ಸುಲ್ತಾನ್, ಮುಡಾ ಅಧ್ಯಕ್ಷ ಡಿ.ದ್ರುವಕುಮಾರ್, ಮೈವಿವಿ ಕುಲಪತಿ ಪ್ರೊ.ಸಿ.ಬಸವರಾಜು ಮತ್ತಿತರರು ಭಾಗಿಯಾಗುವರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: